ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಶ್ವಮಂಗಳ ಕೊಣಾಜೆಯಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ 17ವ. ವಯೋಮಾನದ ಬಾಲಕರ 45 ಕೆ.ಜಿ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಮುಕ್ಕದ ಹೋಲಿ ಸ್ಪಿರಿಟ್ ಇಂಗ್ಲೀಷ್ ಮೀಡಿಯಂ ಶಾಲೆಯ ಜಿತೇಶ್ ಎಸ್ ಕರ್ಕೇರ ಇವರು ಪ್ರಥಮ ಸ್ಥಾನ ಪಡೆದಿದ್ದಾರೆ. ಮಾತ್ರವಲ್ಲದೆ ಬೆಂಗಳೂರಿನ ಕನಕಪುರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಇವರು ಶೋಭಾ ಎಸ್ ಕರ್ಕೇರ ಹಾಗೂ ಸತೀಶ್ ಕರ್ಕೇರ ದಂಪತಿಗಳ ಪುತ್ರ. ಇವರು ಸಸಿಹಿತ್ಲು ಆಂಜನೇಯ ವ್ಯಾಯಾಮ ಶಾಲೆಯ ಸತೀಶ್ ಬೋಳಾರ್ ಅವರಿಂದ ತರಬೇತಿ ಪಡೆದಿದ್ದಾರೆ.