ದೇವದುರ್ಗ: ರಾಜ್ಯ ಸರ್ಕಾರ ಹೆಚ್ಚಿನ ಬೆಲೆ ಬಾಳುವ ಭೂಮಿಯನ್ನು ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಗೆ ನೀಡಲು ಮುಂದಾಗಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸಿದೆ ಎಂದು ತಾಲೂಕು ಅಧ್ಯಕ್ಷ ಕೆ.ಗಿರಿಲಿಂಗಸ್ವಾಮಿ ಹೇಳಿದರು.
ಮಂಗಳವಾರ ಪತ್ರಿಕೆ ಹೇಳಿಕೆ ನೀಡಿದರು. ಖನಿಜ ಸಂಪನ್ಮೂಲ ಒಳಗೊಂಡ ಸುಮಾರು 3677ಎಕರೆ ಭೂಮಿಯನ್ನು ಒಂದು ಎಕರೆಗೆ ಒಂದೂವರೆ ಲಕ್ಷ ರೂ.ಯಂತೆ ಖಾಸಗಿ ವಲಯಕ್ಕೆ ನೀಡಿರುವುದು ಖಂಡನೀಯ.
ರಾಜ್ಯದಲ್ಲಿ ಲಕ್ಷಾಂತರ ರೈತರು ಸಾಗುವಳಿಗಾಗಿ ಅರ್ಜಿಸಲ್ಲಿಸಿದ್ದಾರೆ. ಅವರಿಗೆ ನೀಡದೆ ಜಿಂದಾಲ್‌ಗೆ ನೀಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬ ಪ್ರಶ್ನೆ ಮೂಡುತ್ತಿದೆ. ಅ ಹಣಕ್ಕೆ ರೈತರಿಗೆ ಕೊಟ್ಟರೆ ಸಾಗುವಳಿ ಮಾಡಿಕೊಳ್ಳುತ್ತಾರೆ.
ಖಾಸಗಿ ಕಾರ್ಪೊರೇಟ್ ಅಭಿವೃದ್ಧಿ ದೇಶದ ಅಭಿವೃದ್ಧಿ ಎನ್ನುವುದು ಮೂರ್ಖತನ. ಕೂಡಲೇ ಜಿಂದಾಲ್ ಕಂಪನಿಗೆ ಭೂಮಿ ಕೊಡುವುದನ್ನ ನಿಲ್ಲಿಸಬೇಕು. ನಿರ್ಲಕ್ಷ್ಯ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.