ಜಿಲ್ಲೆ

ಜಿಮ್ನಾಸ್ಟಿಕ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೂಡಿಗೆ ಕ್ರೀಡಾ ಶಾಲೆಯಲ್ಲಿ ಶುಕ್ರವಾರ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಜಿಮ್ನಾಸ್ಟಿಕ್ ವಿಭಾಗದಲ್ಲಿ ಭಾಗವಹಿಸಿದ್ದ ಕೂಡಿಗೆ ಕ್ರೀಡಾ ಶಾಲೆಯ ಜಿಮ್ನಾಸ್ಟಿಕ್‌ನ ಎಂಟು ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡಾಪಟುಗಳಾದ ರಾಕೇಶ್, ಜೀವನ್, ಕೆ.ಎಸ್. ಜೀವನ್, ಪಾರ್ಥ, ಬಾಲಕಿಯರ ವಿಭಾಗದಲ್ಲಿ ನವ್ಯಶ್ರೀ, ಚೈತ್ರ, ಹರ್ಷಿಣಿ ,ಅರ್ಚನಾ ರಾಜ್ಯಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.

ಇವರುಗಳಿಗೆ ಕೂಡಿಗೆ ಕ್ರೀಡಾ ಶಾಲೆಯ ಜಿಮ್ನಾಸ್ಟಿಕ್ ತರಬೇತುದಾರ ಜಿ. ಸುರೇಶ್ ತರಬೇತಿ ನೀಡಿದ್ದರು.