ಹಾವೇರಿ: ಜಿಲ್ಲಾ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ವೇದಿಕೆ (ಸಿಜಿಆರ್‌ಎಫ್) ಅಧಿಕಾರೇತರ ಸದಸ್ಯರ ನಾಮನಿರ್ದೇಶನಕ್ಕೆ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯುತ್ ಕ್ಷೇತ್ರ, ಗ್ರಾಹಕರ ವ್ಯವಹಾರಕ್ಕೆ ಸಂಬಂಧಿಸಿದ ವಿಷಯದಲ್ಲಿ ಅನುಭವುಳ್ಳ ಮತ್ತು ಸಿಜಿ ಆರ್‌ಎಫ್‌ಗೆ ಸದಸ್ಯರಾಗಲು ಆಸಕ್ತರು ರ್ಜಿ ಸಲ್ಲಿಸಬಹುದು. ಮನವಿ ಪತ್ರ, ವ್ಯಕ್ತಿಯ ಪರಿಚಯ ಪತ್ರವನ್ನು ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್), ಕಾರ್ಯ ಮತ್ತು ಪಾಲನಾ ವಿಭಾಗ ಹಾವೇರಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್), ಕಾರ್ಯ ಮತ್ತು ಪಾಲನಾ ವಿಭಾಗ ಹಾವೇರಿ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜನಿಯರ್ ನಾಗಪ್ಪ ಎಸ್.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.