ಹಾವೇರಿ: ಹಾವೇರಿ ತಾಲೂಕಿನ ಗುತ್ತಲ ಪಟ್ಟಣದಲ್ಲಿ ಖದೀಮರಿಬ್ಬರು ಬಂಗಾರದ ಅಂಗಡಿ ದೋಚಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಶಂಕರ ಚಿನ್ನಮ್ಮನವರ ಎಂಬುವರ ತರಳಬಾಳು ಜುವೆಲ್ಲರಿ ಶಾಪ್ ನಲ್ಲಿ ಕಳ್ಳತನ ನಡೆದಿದೆ.
ರಾಣೇಬೆನ್ನೂರ ರಸ್ತೆಯ ಜುವೆಲ್ಲರಿ ಶಾಪ್ ಗೆ ಹಿಂಬದಿಯಿಂದ ನುಗ್ಗಿ ಕಳ್ಳತನ ಮಾಡಿದ ಇಬ್ಬರು ಕಳ್ಳರು, ಬಂಗಾರದ ಆಭರಣಗಳು ಲಾಕರ್ ನಲ್ಲಿ ಇರುವ ಕಾರಣ 3 ರಿಂದ 4 ಕೆಜಿ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ.
ಮುಸುಕು ಹಾಕಿಕೊಂಡ ಇಬ್ಬರು ಯುವಕರಿಂದ ಈ ಕೃತ್ಯ ನಡೆದಿದೆ. ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಇಬ್ಬರು ಕಳ್ಳರ ಕೈಚಳಕ ಸೆರೆಯಾಗಿದೆ. ಸ್ಥಳಕ್ಕೆ ಪಿಎಸ್ಐ ಎಂ ಮಣ್ಣಣ್ಣನವರ, ಎಚ್ ಎಫ್ ಪೂಜಾರ, ಪಿ. ವಿ ವಡೇರಹಳ್ಳಿ ಭೇಟಿ ನೀಡಿ ಪರಿಶೀಲಿಸಿದರು. ಗುತ್ತಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.