ಜಿಲ್ಲೆ

ಮನೆಯಿಂದ ವಜ್ರಾಭರಣ ಕಳವು : ಕೆಲಸದಾಳು ಪೊಲೀಸ್ ವಶಕ್ಕೆ

ಕಾಸರಗೋಡು: ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಸನಿಹದ ಕಣಚ್ಚೂರ್ ವಿಲ್ಲಾದ ಫಾತಿಮತ್ ಸಫಾನಾ ಎಂಬುವರ ಮನೆಯಿಂದ 10 ಲಕ್ಷ ರೂ.ಮೌಲ್ಯದ ಬೆಂಡೋಲೆ ಸೇರಿದಂತೆ ವಜ್ರಾಭರಣ ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮನೆ ಕೆಲಸದಾಳು ಯುವತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಉತ್ತರಪ್ರದೇಶ ನಿವಾಸಿ ಹಾಗೂ ಉಪ್ಪಳದಲ್ಲಿ ವಾಸಿಸುತ್ತಿರುವ ಆಸಿಯಾ ಪೊಲೀಸ್ ವಶದಲ್ಲಿರುವ ಯುವತಿ. ಕಾಸರಗೋಡು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಫಾತಿಮತ್ ಸಫಾನಾ ಅವರ ಪುತ್ರಿಯ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಫೆ.18ರಂದು ಆಭರಣ ನಾಪತ್ತೆಯಾಗಿತ್ತು. ಕಳವಿನ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಕೆಲಸದಾಳು ಆಸಿಯಾ ಊರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದುದನ್ನು ಕಂಡು ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದರು.