ಜಿಲ್ಲೆ

ಹಾಡಹಗಲೇ ಮನೆಯ ಬೀಗ ಒಡೆದು ಕಳ್ಳರು: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು

ಮದ್ದೂರು: ಮನೆಯ ಬೀಗ ಒಡೆದು ಚಿನ್ನಾಭರಣ ಮತ್ತು ಹಣವನ್ನು ಕಳ್ಳತನ ಮಾಡಿದ್ದಾರೆ ಎಂದು ತಾಲೂಕಿನ ಕೊಪ್ಪ ಹೋಬಳಿಯ ಡಿ. ಮಲ್ಲಿಗೆರೆ ಗ್ರಾಮದ ಚಂದ್ರಮ್ಮ ಎಂಬುವವರು ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಂಗಳವಾರ ಬೆಳಗ್ಗೆ 11 ಗಂಟೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಜಮೀನಿಗೆ ಹೋಗಿ ಸಂಜೆ ವಾಪಸ್ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. 80,000 ರೂ., 12 ಗ್ರಾಂ ಚಿನ್ನದ ಓಲೆ ಮತ್ತು ಒಂದು ಜೊತೆ ಡ್ರಾಪ್ಸ್ ಹಾಗೂ 10 ಗ್ರಾಂನ ಮೂರು ಚಿನ್ನದ ಉಂಗುರ ಸೇರಿದಂತೆ ಒಟ್ಟು 22 ಗ್ರಾಂ ಚಿನ್ನದ ಒಡವೆಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.

ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸ್ಥಳಕ್ಕೆ ಡಿವೈಎಸ್‌ಪಿ ನವೀನ್ ಕುಮಾರ್, ಸಿಪಿಐ ಮನೋಜ್ ಕುಮಾರ್, ಪಿಎಸ್‌ಐ ಜೆ.ಜೆ. ಶಿವಮಂಜು ಭೇಟಿ ನೀಡಿ ಪರಿಶೀಲಿಸಿದರು.