ಜಿಲ್ಲೆ

ಜೇವರ್ಗಿ: ಬಾಕಿ ವೇತನ ಕೊಡದಿದ್ದರೆ ಆಮರಣಾಂತ ಉಪವಾಸ

ಜೇವರ್ಗಿ: ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಕೂಡಲೇ ಬಾಕಿ ವೇತನ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪುರಸಭೆ ಕಚೇರಿ ಎದುರು ಹೊರಗುತ್ತಿಗೆ ಪೌರ ಕಾರ್ಮಿಕರು ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಶುಕ್ರವಾರ ಮೂರು ದಿನ ಪೂರ್ಣಗೊಳಿಸಿದೆ. ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಹೊರಗುತ್ತಿಗೆ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ನೀರು ನಿರ್ವಹಣೆಗಾರರು, ವಾಹನ ಚಾಲಕರು, ಕಸ ಮತ್ತು ತ್ಯಾಜ್ಯ ವಿಲೇವಾರಿ, ಲೋಡಿಂಗ್ ಮತ್ತು ಅನ್ ಲೋಡಿಂಗ್, ಕಾವಲುಗಾರರು, ಮೇಲ್ವಿಚಾರಕರು ಸೇರಿ 29 ಕಾರ್ಮಿಕರಿಗೆ ಬಾಕಿ ವೇತನ ನೀಡುತ್ತಿಲ್ಲ. 6ರಿಂದ 18 ತಿಂಗಳು ಬಾಕಿ ಉಳಿದಿರುವ ವೇತನ ಹಾಗೂ ಇಪಿಎಫ್, ಇಎಸ್‌ಐ ನಮ್ಮ ಹೆಸರಿಗೆ ಜಮಾ ಮಾಡುವಂತೆ ಸಾಕಷ್ಟು ಬಾರಿ ಮನವಿಪತ್ರ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ ಎಂದು ಕಿಡಿಕಾರಿದರು.

ನಾವು ಭಿಕ್ಷೆ ಕೇಳುತ್ತಿಲ್ಲ, ನಮ್ಮ ದುಡಿಮೆಯ ಸಂಬಳ ಕೊಡಿ ಎಂದು ಮನವಿ ಮಾಡುತ್ತಿz್ದೆÃವೆ. ಬಹುತೇಕ ಕಾರ್ಮಿಕರು ಬಡತನ ರೇಖೆಗಿಂತ ಕೆಳಗಿನವರಿದ್ದಾರೆ. ಸಂಬಳವಿಲ್ಲದೇ ಒಪ್ಪತ್ತಿನ ಗಂಜಿಗಾಗಿ ಪರಿತಪಿಸುತ್ತಿz್ದÉÃವೆ. ನಮ್ಮ ಸಹನೆ ಹಾಗೂ ತಾಳ್ಮೆಗೂ ಮಿತಿ ಇರುತ್ತದೆ. ಕೂಡಲೇ ಬಾಕಿ ವೇತನ ಪಾವತಿಸಬೇಕು. ಸತ್ಯಾಗ್ರಹಕ್ಕೆ ಅಧಿಕಾರಿಗಳು ಸ್ಪಂದಿಸದಿದ್ದರೆ ಆಮರಣ ಉಪವಾಸ ಮುಂದುವರಿಸಬೇಕಾಗುತ್ತದೆ. ಮುಂದಾಗುವ ಅನಾಹುತಕ್ಕೆ ತಾಲೂಕು ಆಡಳಿತವೇ ಹೊಣೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ಪ್ರಭುಲಿಂಗಯ್ಯ, ಕಾಮಣ್ಣ, ಗಿರೀಶ, ಮನ್ಸೂರ್ ಪಟೇಲ್, ಶಿವಕುಮಾರ, ಶ್ರವಣಕುಮಾರ, ವಿಜಯಕುಮಾರ, ಗಂಗಾರಾಮ, ಸಾಯಬಣ್ಣ, ಭಗವಾನ್, ಸಾಯಿಕುಮಾರ, ಇರ್ಫಾನ್, ಮಲ್ಲಿನಾಥ, ಅಭಿಷೇಕ, ಧರ್ಮರಾಜ ಇತರರಿದ್ದರು.