ಜೇವರ್ಗಿ: ತಾಯಿ ಮಕ್ಕಳ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ಸಲಕರಣೆ ನೀಡಲು ಅಗತ್ಯ ಅನುದಾನ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ ಭರವಸೆ ನೀಡಿದರು.
ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ ೧೦೦ ಹಾಸಿಗೆಯುಳ್ಳ ೨೧ ಕೋಟಿ ಅಂದಾಜು ವೆಚ್ಚದ ತಾಯಿ ಮಕ್ಕಳ ಆಸ್ಪತ್ರೆಯನ್ನು ಮಂಗಳವಾರ ಸಂಜೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ೩೩ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ಉz್ದೆÃಶಿಸಲಾಗಿದೆ. ೧೦೦ ಬೇಡ್‌ನ ತಾಯಿ ಮಕ್ಕಳ ಆಸ್ಪತ್ರೆಗೆ ಮಾಜಿ ಮುಖ್ಯ ಮಂತ್ರಿ ದಿ.ಎನ್ ಧರ್ಮಸಿಂಗ್ ನಾಮಕರಣ ಮಾಡಿದ್ದು, ಉದ್ಘಾಟನೆ ನನ್ನ ಸೌಭಾಗ್ಯ ಎಂದರು.
ಧರ್ಮಸಿAಗ್ ನನಗೆ ಟಿಕೆಟ್ ನೀಡಿ, ಗೆಲ್ಲಿಸಿ ರಾಜಕೀಯಕ್ಕೆ ತಂದರು. ಜಾತಿ ಇಲ್ಲದೆ ರಾಜಕೀಯ ಮಾಡಿ, ಮುಖ್ಯಮಂತ್ರಿ ಸ್ಥಾನ ಪಡೆದವರು ಧರ್ಮಸಿಂಗ್. ಅವರ ಹಾದಿಯಲ್ಲಿ ಡಾ.ಅಜಯಸಿಂಗ್ ಸಾಗುತ್ತಿದ್ದಾರೆ. ಶೀಘ್ರ ಅವರಿಗೆ ಸಚಿವರಾಗುವ ಕಾಲ ಕೂಡಿ ಬರಲಿದೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಜನರ ಹಿತ ಕಾಪಾಡುತ್ತಿದೆ. ರೈತರ ನೋವಿಗೆ ಸ್ಪಂದಿಸುತ್ತಿರುವ ರಾಜ್ಯ ಬರ ಪರಿಹಾರ ಕಲ್ಪಿಸಿದೆ. ಕೇಂದ್ರ ಸರ್ಕಾರ ನಯಾಪೈಸೆ ಬಿಡುಗಡೆ ಮಾಡದೆ ನಿರ್ಲಕ್ಷಿಸಿದೆ. ಇದನ್ನು ಪ್ರಶ್ನಿಸಬೇಕಾದ ರಾಜ್ಯದ ಸಂಸದರು ಧ್ವನಿ ಎತ್ತುತ್ತಿಲ್ಲ. ಶ್ರೀಮಂತರ ೧೪ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಕೇಂದ್ರ ಸರ್ಕಾರ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಹಿಂದೇಟು ಹಾಕುತ್ತಿದೆ ಎಂದು ಕಿಡಿ ಕಾರಿದರು.
ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಮಾತನಾಡಿ, ಕಲ್ಯಾಣ ಕರ್ನಾಟಕ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣ ಆವಿಷ್ಕಾರ ರೂಪಿಸಲಾಗಿದೆ. ಎಂಟು ವರ್ಷದಿಂದ ಈ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆಗಿರಲಿಲ್ಲ. ೩೩ ಆರೋಗ್ಯ ಕೇಂದ್ರ ಸ್ಥಾಪಿಸಲು ಸರ್ಕಾರ ಮಂಜೂರಿ ನೀಡಿದೆ ಎಂದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ತಿಪ್ಪಣಪ್ಪ ಕಮಕನೂರ, ಪ್ರಮುಖರಾದ ಜಗದೇವ ಗುತ್ತೇದಾರ, ಡಾ.ರವಿಕಾಂತ ಸ್ವಾಮಿ, ಡಾ.ಶರಣಬಸಪ್ಪ ಗಣಜಲಖೇಡ, ಡಾ.ಅಂಬಾರಾಯ ರುದ್ರವಾಡಿ, ಡಾ.ಸಿದ್ದು ಪಾಟೀಲ್, ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ತಾಪಂ ಅಧಿಕಾರಿ ಅಬ್ದುಲ್ ನಬಿ, ಕಾರ್ಯನಿರ್ವಾಹಕ ಅಭಿಯಂತರ ಮಾಣಿಕ ಕನಕಟ್ಟಿ ಇತರರಿದ್ದರು.