ಜಿಲ್ಲೆ

ಜರ್ಸಿ ಆಕಳು ಕಳವು

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ರಾಜಧಾನಿ ಕಾಲನಿಯ ರಸ್ತೆ ಬದಿಯಲ್ಲಿ ಕಟ್ಟಿ ಹಾಕಿದ್ದ ಜರ್ಸಿ ಆಕಳು ಕಳವಾದ ಘಟನೆ ಇತ್ತೀಚೆಗೆ ನಡೆದಿದೆ.

ದ್ಯಾಮಪ್ಪ ಶಿರಹಟ್ಟಿ ಎಂಬುವರಿಗೆ ಸೇರಿದ 50 ಸಾವಿರ ರೂ. ಮೌಲ್ಯದ ಆಕಳನ್ನು ಕಳ್ಳರು ಬಿಚ್ಚಿಕೊಂಡು ಹೋಗಿದ್ದಾರೆ. ಗೋಕುಲ ರೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.