ಜಿಲ್ಲೆ

ಗ್ರಾಮೀಣ ರೈತರ ಜೀವನಾಡಿ ಸಹಕಾರಿ ಸಂಘ

ಕಡಬ: ಮೊಳಹಳ್ಳಿ ಶಿವರಾಯರ ಸಹಕಾರಿ ಚಳವಳಿಯ ಭಾಗವಾಗಿ ಹುಟ್ಟಿದ ಸಹಕಾರಿ ಸಂಘಗಳು ದ.ಕ.ಜಿಲ್ಲೆಯ ರೈತರ ಜೀವನಾಡಿಯಾಗಿ ಬೆಳೆದು ನಿಂತಿವೆ. ಕೃಷಿ ಅಧಾರಿತ ಬದುಕು ಕಟ್ಟಿಕೊಂಡ ರೈತಾಪಿ ವರ್ಗಕ್ಕೆ ಸಹಕಾರಿ ಸಂಘಗಳು ಬೆನ್ನೆಲುಬಾಗಿ ನಿಂತು ರೈತನಿಗೆ ಆರ್ಥಿಕ ಚೈತನ್ಯ ನೀಡುತ್ತಿದೆ. ಕೃಷಿ ಸಂಬಂಧಿಸಿದ ವಿಚಾರಗಳ ಕಾರ‌್ಯಕ್ರಮ ಆಯೋಜಿಸಿ ಶತಮಾನೋತ್ಸವ ಅರ್ಥಪೂರ್ಣವಾಗಿಸಿರುವುದು ಶ್ಲಾಘನೀಯ ಎಂದು ದ.ಕ.ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಶನಿವಾರ ಕಡಬ ತಾಲೂಕು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕಾಣಿಯೂರು ರಾಮತೀರ್ಥಮಠ ಜಾತ್ರಾ ಮೈದಾನದಲ್ಲಿ ಕೃಷಿ ಮೇಳ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಾರ್ವಾಕದಂಥ ಗ್ರಾಮೀಣ ಭಾಗದಲ್ಲಿ ರೈತರ ಶ್ರೇಯೋಭಿವೃದ್ಧಿ ದೂರದೃಷ್ಟಿಯಿಂದ ಹಿರಿಯರು ಸೇರಿಕೊಂಡು ಸಹಕಾರಿ ಸಂಘ ಸ್ಥಾಪಿಸಿ ನೂರು ವರ್ಷ ಪೂರೈಸಿದೆ. ಕ್ಯಾಂಪ್ಕೊ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ ಮಾತನಾಡಿ, ಸಂಸ್ಥೆಯ ಕೆಲವು ನಿಯಮ ಪಾಲಿಸಿದರೆ ಚಾರ್ವಾಕದಲ್ಲಿ ಕ್ಯಾಂಪ್ಕೊ ಖರೀದಿ ಕೇಂದ್ರ ತೆರೆಯಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ, ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಆರ್.ಗೌಡ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು, ಚಾರ್ವಾಕ ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಧರ್ಮೇಂದ್ರ ಕಟ್ಟತ್ತಾರು, ಶಾಸಕಿ ಭಾಗೀರಥಿ ಮುರುಳ್ಯ, ಸವಣೂರು ಪ್ರಾ.ಕೃ.ಸ.ಸಂ.ಅಧ್ಯಕ್ಷ ತಾರನಾಥ ಕಾಯರ್ಗ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮನ್ಮಥ ಎಸ್.ಎನ್., ಚಾರ್ವಾಕ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಪುತ್ತೂರು ನೋಟರಿ ವಕೀಲ ಶಿವಪ್ರಸಾದ್, ಕಾಣಿಯೂರು ಏಲಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಮೊಕ್ತೇಸರ ರೋಹಿತ್ ಗೌಡ ಅನಿಲ, ಚಾರ್ವಾಕ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತ ಕುಮಾರ್ ಬೈಲಂಗಡಿ, ಪರಮೇಶ್ವರ ಅನಿಲ, ಲೋಕೇಶ ಗೌಡ ಆತಾಜೆ, ಶೀಲಾವತಿ ಮುಗರಂಜ, ವಿಶ್ವನಾಥ ಕೂಡಿಗೆ, ವೀಣಾ ಅಂಬುಲ, ರಮೇಶ್ ಉಪ್ಪಡ್ಕ, ದಿವಾಕರ ಮರಕ್ಕಡ, ಸುಂದರ ದೇವಸ್ಯ, ರತ್ನಾವತಿ ಮುದ್ವ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್.ಉದನಡ್ಕ ಪ್ರಸ್ತಾವಿಸಿ, ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ ಪಿ.ವಂದಿಸಿದರು. ವಸಂತ ವೀರಮಂಗಲ ನಿರೂಪಿಸಿದರು. *ವಿಚಾರಗೋಷ್ಠಿ: ಅಡಕೆ, ತೆಂಗು, ಮಿಶ್ರ ಬೆಳೆಯ ಬಗ್ಗೆ ವಿಚಾರಗೋಷ್ಠಿ ನಡೆಯಿತು. ವಿಟ್ಲ ಸಿಪಿಸಿಆರ್‌ಐ ಹಿರಿಯ ವಿಜ್ಞಾನಿ ಡಾ.ನಾಗಾರಾಜ್‌ಎನ್.ಆರ್. ವಿಚಾರ ಮಂಡಿಸಿದರು. ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಅತಿಥಿಯಾಗಿದ್ದರು. ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್.ಉದನಡ್ಕ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ವಂದಿಸಿದರು. ಚಾರ್ವಾಕ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ ನಿರೂಪಿಸಿದರು. ಸನ್ಮಾನ, ಸಾಂಸ್ಕೃತಿಕ ಸಂಭ್ರಮ ಸಂಘದ ಮಾಜಿ ಉಪಾಧ್ಯಕ್ಷರಿಗೆ, ನಿರ್ದೇಶಕರಿಗೆ, ನಾಟಿ ವೈದ್ಯರಿಗೆ, ರಾಷ್ಟ್ರಮಟ್ಟದ ಕ್ರೀಡಾ ಸಾಧಕರಿಗೆ, ಸಂಘದ ಅಭಿವೃದ್ಧಿಯ ದಾನಿಗಳಿಗೆ, ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಕ್ಯಾಂಪ್ಕೊ ವತಿಯಿಂದ ಚಾರ್ವಾಕದಲ್ಲಿ ರೈತ ಉತ್ಪನ್ನ ಖರೀದಿ ಕೇಂದ್ರ ತೆರೆಯುವಂತೆ ಕ್ಯಾಂಪ್ಕೊ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ ಮುಖಾಂತರ ಕ್ಯಾಂಪ್ಕೊ ಆಡಳಿತ ಮಂಡಳಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೃಷಿ ಚಟುವಟಿಕೆ ಸಂಬಂಧಿಸಿದ ಮಳಿಗೆಗಳು, ಪ್ರವೇಶ ದ್ವಾರದಲ್ಲಿ ಸಂಘದ ವತಿಯಿಂದ ಅಳವಡಿಸಲಾದ ಎತ್ತಿನ ಬಂಡಿಯ ಕಲಾಕೃತಿ ಗಮನಸೆಳೆಯಿತು.

ಕೃಷಿಯಿಂದ ಯುವಕರು ವಿಮುಖರಾಗುವ ಕಾಲಘಟ್ಟದಲ್ಲಿರುವ ಪ್ರಸ್ತುತ ದಿನಗಳಲ್ಲಿ ಕೃಷಿಯೊಂದಿಗೆ ಸ್ವಉದ್ಯೋಗಕ್ಕೆ ಒತ್ತು ನೀಡುವ ಸಲುವಾಗಿ ತರಬೇತಿಯಂಥ ಹಲವಾರು ಸಮಾಜಮುಖಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಘ ಶತಮಾನೋತ್ಸವ ಅರ್ಥಗರ್ಭಿತವಾಗಿ ಆಚರಿಸಿದೆ. ಧರ್ಮಸ್ಥಳ ಯೋಜನೆ ಹಲವಾರು ಜನಪರ ಯೋಜನೆ ಜನರಿಗೆ ತಲುಪಿಸುವಲ್ಲಿ ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ. - ಮೇದಪ್ಪ ಗೌಡ ನಾವೂರು, ಯೋಜನಾಧಿಕಾರಿ, ಧರ್ಮಸ್ಥಳ ಯೋಜನೆ ಕಡಬ ತಾಲೂಕು