ಜಿಲ್ಲೆ

ಜೀಪು, ಬೈಕ್ ಡಿಕ್ಕಿಯಾಗಿ ಸವಾರ ಮೃತ್ಯು

ಸೌಮ್ಯ ಆರ್

ಕಾಸರಗೋಡು: ಪೈವಳಿಕೆ ಜೋಡುಕಲ್ಲಿನಲ್ಲಿ ಥಾರ್‌ಜೀಪು ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಉಪ್ಪಳ ಪ್ರತಾಪನಗರ ಪುಳಿಕುತ್ತಿ ನಿವಾಸಿ ಅಬ್ದುಲ್ ಗಫೂರ್ ಬಯಾಸಾಗಿ(35)ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ ಪೈವಳಿಕೆಯಿಂದ ಉಪ್ಪಳಕ್ಕೆ ಬೈಕಲ್ಲಿ ತೆರಳುತ್ತಿದ್ದಾಗ ಜೋಡುಕಲ್ಲಿನಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಅಬ್ದುಲ್ ಗಫೂರ್ ಉಪ್ಪಳದಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದರು. ಉಪ್ಪಳ ಕೋಡಿಬೈಲು ನಿವಾಸಿ ಅಬ್ದುಲ್ ಮುನಾಫ್ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.