ಜಿಲ್ಲೆ

ಜೀಪು ಚಾಲಕರ ಸಂಘದಿ0ದ ಸ್ವಚ್ಛತೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನಕ್ಕೆ ಮಾಂದಲಪಟ್ಟಿ ಜೀಪು ಚಾಲಕರ ಸಂಘವೂ ಕೈಜೋಡಿಸಿತ್ತು. ಸುಮಾರು 25 ಮಂದಿ ನಾಲ್ಕೆöÊದು ತಂಡಗಳಾಗಿ ಶ್ರಮಾದಾನದಲ್ಲಿ ತೊಡಗಿಸಿಕೊಂಡರು. ನಂದಿಮೊಟ್ಟೆಯಿAದ ಮಾಂದಲಪಟ್ಟಿವರೆಗೆ 18 ಕಿ.ಮೀ. ರಸ್ತೆ ಬದಿಯಲ್ಲಿನ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.

ಬೆಳಗ್ಗೆ 8 ಗಂಟೆಯಿAದಲೇ ಸ್ವಚ್ಛತಾ ಕಾರ್ಯ ಆರಂಭಗೊAಡಿತು. ಪ್ರವಾಸಿಗರು ಹಾಗೂ ಸಾರ್ವಜನಿಕರು ರಸ್ತೆ ಬದಿ ಕಸ ಎಸೆಯದೆ ಸ್ವಚ್ಛತೆ ಕಾಪಾಡುವಂತೆ ಮಾಂದಲಪಟ್ಟಿ ಜೀಪು ಚಾಲಕರ ಸಂಘದ ಖಜಾಂಚಿ ಮೊಣ್ಣಯ್ಯ ಈ ಸಂದರ್ಭ ಮನವಿ ಮಾಡಿದರು. ಮಾಂದಲಪಟ್ಟಿಗೆ ತೆರಳುವ ಪ್ರವಾಸಿಗರು ಅಲ್ಲಲ್ಲಿ ಕಸ ಹಾಕದಂತೆ ಜೀಪು ಚಾಲಕರು ಎಚ್ಚರ ವಹಿಸಬೇಕೆಂದು ಹೇಳಿದರು.

ಸಂಘದ ಪ್ರಮುಖರಾದ ಶರಣು, ಪುಷ್ಪರಾಜ್, ರವಿ, ಡೇವಿಡ್‌ರಾಜ್, ದರ್ಶನ್, ಪಾಂಡಿರ ರವಿ, ಪಾಂಡಿರ ಚೇತು, ಗಜೇಂದ್ರ, ನಾರಾಯಣ, ಮನು, ಗಣೇಶ್, ರಾಜೇಶ್, ಮುತ್ತಣ್ಣ ಮತ್ತಿತರರು ಈ ಸಂದರ್ಭ ಇದ್ದರು.