ಜಿಲ್ಲೆ

ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್,ನಾನಾ ಸಂಘಟನೆಗಳಿಂದ ಪ್ರತ್ಯೇಕ ಪ್ರತಿಭಟನೆ

ಚಿತ್ರದುರ್ಗ:ಕೇಂದ್ರ ಸರ್ಕಾರದ ಹಿಂದಿ ದಿನದ ಆಚರಣೆ ವಿರೋಧಿಸಿ ಜಾತ್ಯತೀತ ಜನತಾದಳ ಜಿಲ್ಲಾ ಘಟಕ,ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ),ಕರುನಾಡ ವಿಜಯಸೇನೆ ಸಂಘಟನೆಗಳಿಂದ ಬುಧವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟಗಳು ನಡೆದವು.ಪಕ್ಷದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಜೆಡಿಎಸ್ ಕಾರ‌್ಯಕರ್ತರು ಮೆರವಣಿಗೆ ನಡೆಸಿದರು.

ಹಿಂದಿ ದಿನದ ಆಚರಣೆ ಕುರಿತು ಹೆಚ್ಚಿನ ವ್ಯಾಮೋಹ ಹೊಂದಿದಂತಿವೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಯಾವ ಕಾರಣಕ್ಕೂ ಆಚರಿಸಬಾರದು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್,ಜಿಲ್ಲಾಧ್ಯಕ್ಷ ಡಿ.ಯಶೋಧರ್,ಮುಖಂಡರಾದ ಜಿ.ಬಿ.ಶೇಖರ್,ಡಿ.ಗೋಪಾಲ ಸ್ವಾಮಿ ನಾಯಕ,ಆರ್.ನಿಂಗಾನಾಯ್ಕ,ಸಣ್ಣತಿಮ್ಮಣ್ಣ,ನಜೀರ್,ಅಬ್ಬು,ಪರಮೇಶ್ವರಪ್ಪ,ವಿರುಪಾಕ್ಷಪ್ಪ,ಪರಮೇಶ್ವರಪ್ಪ ಈಚಘಟ್ಟ,ರುದ್ರಣ್ಣ, ಮಂಜುನಾಥ್,ನಗರಸಭೆ ಸದಸ್ಯ ನಸ್ರುಲ್ಲಾ, ಮಾಜಿ ಸದಸ್ಯ ತಿಪ್ಪೇಸ್ವಾಮಿ,ವಕೀಲ ಅಶೋಕ್ ಬೆಳಗಟ್ಟ ಇತರರಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ

ವೇದಿಕೆ ಜಿಲ್ಲಾ ಘಟಕದದಿಂದ ಹಿಂದಿನ ದಿನದ ಆಚರಣೆ ವಿರೋಧಿಸಿ ಡಿಸಿಗೆ ಅವರಿಗೆ ಮನವಿ ಸಲ್ಲಿಸಲಾಯಿತು. ವೇದಿಕೆ ಜಿಲ್ಲಾಧ್ಯಕ್ಷ ರಮೇಶ್, ಮುಖಂಡರಾದ ಜಿ.ರಾಜಪ್ಪ, ಪಿ.ರಮೇಶ್,ಎಸ್.ಬಿ.ಗಣೇಶ್,ಟಿ.ಕೆ.ಶಿವಮೂರ್ತಿ,ಬಿ.ವೆಂಕಟೇಶ್,ಆರ್.ಜಿ.ಲಕ್ಷ್ಮಣ್,ಎಂ.ಕೆ.ಹಟ್ಟಿ ರಮೇಶ್,ವಸಂತಾ,ಮಲ್ಲ ಪ್ರಸಾದ್, ಬಾಬು ಹಳಿಯೂರ್,ಅಶ್ವಥ್,ವೆಂಕಟೇಶ್,ಸ್ವಪ್ನ,ಉದಯಶಂಕರ್,ಗೋ.ಬಸವರಾಜು,ದಾದಾಪೀರ್,ಜಾಕೀರ್,ಮನು,ನೀಲಕಂಠ, ದ್ರಾಕ್ಷಾಯಿಣಿ,ಮಂಜುಳಾ,ಎಂ.ಕೆ.ಹಟ್ಟಿ ಮಾರುತಿ,ರುದ್ರೇಶ್,ಕಾರ್ತಿಕ್,ರವಿ ಇತರರಿದ್ದರು.

ಕರುನಾಡ ವಿಜಯಸೇನೆ ಸೇನೆ

ಜಿಲ್ಲಾ ಘಟಕದಿಂದ

ಹಿಂದಿ ದಿನದ ಆಚರಣೆ ವಿರೋಧಿಸಿ ಪ್ರತಿಭಟಿಸಲಾಯಿತು. ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್,ವೀಣಾ,ರವಿಕುಮಾರ್‌ನಾಯ್ಕ,ಅಶೋಕ್,ಸಿ.ಜಗದೀಶ್,ರತ್ನಮ್ಮ,ಸಂಜೀವಮೂರ್ತಿ,ಅವಿನಾಶ್,ನಾಗರಾಜ್ ಮುತ್ತು, ಕಮಲಾ, ಚಂದ್ರಮ್ಮ, ಎಚ್.ಕಮಲಾ,ಮೆಹ್ತಾ ಫರ್ಜಾನ,ನಿಸಾರ್‌ಅಹಮದ್,ಮಹಮದ್ ರಫಿ ಇತರರಿದ್ದರು.

----