ಜಿಲ್ಲೆ

ಪಡಿತರ ಚೀಟಿಗಾಗಿ ಜೆಡಿಎಸ್ ಪ್ರತಿಭಟನೆ

Dharwada - Basavaraj Idli

ಹುಬ್ಬಳ್ಳಿ: ಅರ್ಹರಿಗೆ ಸಮರ್ಪಕ ಪಡಿತರ ಚೀಟಿ ನೀಡದಿರುವುದನ್ನು ವಿರೋಧಿಸಿ ಇಲ್ಲಿಯ ಪೂರ್ವ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿಯ ಮಹಾನಗರ ಪಾಲಿಕೆ ಕಚೇರಿ ಬಳಿಯ ಆಹಾರ ನಾಗರಿಕ ಪೂರೈಕೆ ಇಲಾಖೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಳೆದ ನಾಲ್ಕು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಆಜಿರ್ ಸಲ್ಲಿಸಿ ಕಾಯುತ್ತಿದ್ದರೂ ಇದುವರೆಗೂ ಸಿಕ್ಕಿಲ್ಲ. ಇದರಿಂದ ನಿಜ ಫಲಾನುಭವಿಗಳು ಪಡಿತರದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು. ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಪೂರ್ವ ಕ್ಷೇತ್ರದ ಅಧ್ಯಕ್ಷ ಅಹ್ಮದ್ ಅರಸೀಕೆರೆ, ಮುಖಂಡರಾದ ಶ್ರೀಕಾಂತ ತೆಲಗರ, ಶಂಕರ ಪವಾರ್, ಇನಾಯತ ಹೆಬ್ಬಳ್ಳಿ, ಮಕ್ತುಮಹುಸೇನ ಮಸ್ತಾನವಾಲೆ, ಭೀಮರಾಯ ಗುಡೇನಕಟ್ಟಿ, ಬಾಷಾ ಮುದಗಲ್ಲ, ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.