ಜಿಲ್ಲೆ

ಅಪರೇಷನ್​ ಕಮಲದ ಬಗ್ಗೆ ಎಚ್​ ವಿಶ್ವನಾಥ್​ ಬರೆಯುವ ಪುಸ್ತಕವನ್ನು ನಾವು ಎದುರು ನೋಡುತ್ತಿದ್ದೇವೆ: ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ಕೆ.ಕುಮಾರಸ್ವಾಮಿ

chandru

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಎಚ್​.ವಿಶ್ವನಾಥ್​ ಸ್ಥಿತಿ ಈಗ ಏನಾಗಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ಕೆ.ಕುಮಾರಸ್ವಾಮಿ ಪ್ರಶ್ನಿಸಿದರು.

ಬಿಜೆಪಿಯಲ್ಲಿ ಅನುಭವಿಸುತ್ತಿರುವ ಸ್ಥಿತಿಯಿಂದ ಅವರಿಗೆ ಈಗ ಪಶ್ಚಾತ್ತಾಪ ಆಗಿರಬಹುದು. ಈ ಹಿನ್ನೆಲೆಯಲ್ಲಿ ಅವರು ಆಪರೇಷನ್​ ಕಮಲದ ಬಗ್ಗೆ ಪುಸ್ತಕ ಬರೆಯಲು ಮುಂದಾಗಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಚ್​.ವಿಶ್ವನಾಥ್​ ಆಪರೇಷನ್​ ಕಮಲದ ಬಗ್ಗೆ ಬರೆಯುವ ಪುಸ್ತಕವನ್ನು ನಾವು ಎದುರು ನೋಡುತ್ತಿದ್ದೇವೆ. ಏನು ಬರೆಯುತ್ತಾರೋ ಬರೆಯಲಿ ಕಾದು ನೋಡೋಣ ಎಂದು ಅವರು ಹೇಳಿದರು.

ಸಂಪುಟ ವಿಸ್ತರಣೆ ಗೊಂದಲ ಹಾಗೂ ಒತ್ತಡವನ್ನು ಸಿಎಂ ಯಡಿಯೂರಪ್ಪ ಅನುಭವಿಸುತ್ತಿದ್ದಾರೆ. ಯಾವ ಕಾರಣಕ್ಕೆ ಶಾಸಕರು ರಾಜೀನಾಮೆ ಕೊಟ್ಟಿದ್ರೋ, ಅದೇ ಪರಿಸ್ಥಿತಿ ಮತ್ತೆ ಅವರಿಗೆ ಈಗ ಬಂದಿದೆ. ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂತಾ ರಾಜೀನಾಮೆ ಕೊಟ್ಟಿದ್ರು. ಈಗ ಸಿಎಂ ಯಡಿಯೂರಪ್ಪ ಕೂಡ ಅನ್ಯ ಪಕ್ಷಗಳಿಂದ ತೆರಳಿದವರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. (ದಿಗ್ವಿಜಯ ನ್ಯೂಸ್​)