ಜಿಲ್ಲೆ

ಜೆಡಿಎಸ್ ಮುಖಂಡರ ಸಭೆ

ಹುಬ್ಬಳ್ಳಿ: ಜನತಾದಳ ಜಾತ್ಯತಿತ ಪಕ್ಷದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆಯ ಪ್ರಮುಖರ ಸಭೆ ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿತು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ. 10ರಂದು ಏರ್ಪಡಿಸಿರುವ ಪಕ್ಷದ ಮುಖಂಡರು, ಪದಾಧಿಕಾರಿಗಳ ಸಭೆಯಲ್ಲಿ ಧಾರವಾಡ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಭೆ ತೀರ್ಮಾನಿಸಿತು.

ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಕೈಗೊಳ್ಳುವ ಕ್ರಮ ಹಾಗೂ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಸೋಲಿನ ಕುರಿತು ಚಚಿರ್ಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಮಹಾನಗರ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಹಾಗೂ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ ಅವರು, ಕಾರ್ಯಕರ್ತರು ಬೆಂಗಳೂರು ಸಭೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ, ಜೆಡಿಎಸ್ ಕಾರ್ಯಾಧ್ಯಕ್ಷ ಹನುಮಂತಪ್ಪ ಆಲ್ಕೋಡ, ಕೋರ್ ಕಮಿಟಿ ಸದಸ್ಯ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾಜಿ ಸಚಿವ ಕೆ.ಎನ್. ಗಡ್ಡಿ ಅವರು ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಅನಿಲಕುಮಾರ, ಪ್ರಕಾಶ ಅಂಗಡಿ, ನವೀನಕುಮಾರ, ಸಿದ್ಧಲಿಂಗೇಶ್ವರಗೌಡ ಮಹಾಂತಒಡೆಯರ, ಮಂಜುನಾಥ ಹಗೇದಾರ, ಪೂಣಿರ್ಮಾ ಸವದತ್ತಿ, ರೇಖಾ ನಾಯ್ಕರ, ಪೂಜಾ ಮೆಣಸಿನಕಾಯಿ, ಚಿದಂಬರ ನಾಡಗೌಡ, ಬಾಷಾಸಾಬ ಮುದ್ಗಲ್, ಶಿವಶಂಕರ ಕಲ್ಲೂರ, ಜಿ.ಎನ್. ತೋಟದ, ರಮೇಶ ಹೆಬ್ಬಳ್ಳಿ, ಶ್ರೀಶೈಲ ಮೂಲಿಮನಿ, ಹನುಮಂತಪ್ಪ ಕಲ್ಲವಡ್ಡರ, ಮುಖಂಡರು ಉಪಸ್ಥಿತರಿದ್ದರು.