ಹುಬ್ಬಳ್ಳಿ: ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ವರಿಷ್ಠರು ಕೈಗೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುವುದಾಗಿ ಜಿಲ್ಲೆಯ ಜೆಡಿಎಸ್ ಮುಖಂದರು ಸರ್ವಾನುಮತದ ನಿರ್ಣಯವನ್ನು ಕೈಗೊಂಡಿದ್ದಾರೆ.
ನಗರದ ಪ್ರವಾಸಿ ಮಂದರಿದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆಯ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು.
ಬರೀ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮೈತ್ರಿ ಹೊಂದಾಣಿಕೆ ಸೀಮಿತವಾಗಬಾರದು. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ ನಗರಸಭೆಯಂತಹ ಚುನಾವಣೆಯಲ್ಲಿ ಸ್ಥಳಿಯ ಮಟ್ಟದಲ್ಲಿ ಕೂಡಾ ಬಿಜೆಪಿ ಜತೆ ಮೈತ್ರಿ ಆಗಬೇಕು ಎಂದು ಕಾರ್ಯಕರ್ತರು ಅಭಿಪ್ರಾಯ ಮಂಡಿಸಿದರು.
ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅವರು, ಸಭೆಯ ನಿರ್ಣಯಗಳನ್ನು ಪಕ್ಷದ ರಾಜ್ಯ ಕಚೇರಿಗೆ ಕಳಿಸಲಾಗುವುದು ಎಂದು ಹೇಳಿದರು.
ರಾಜ್ಯ ಕೋರ್ ಕಮಿಟಿ ಸದಸ್ಯ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾಜಿ ಸಚಿವ ಕೆ.ಎನ್. ಗಡ್ಡಿ ಅವರು ಮಾತನಾಡಿದರು.
ಮುಖಂಡರಾದ ಗಜಾನನ ಅಣ್ವೇಕರ, ವಿನಾಯಕ ಗಾಡಿವಡ್ಡರ, ನವೀನಕುಮಾರ, ಸಿದ್ಧಲಿಂಗೇಶ್ವರಗೌಡ ಮಹಾಂತಒಡೆಯರ, ಮಾರುತಿ ಹಿಂಡಸಗೇರಿ, ಶ್ರೀಶೈಲ ಗಡದಿನ್ನಿ, ಮಂಜುನಾಥ ಹಗೇದಾರ, ರೇಖಾ ನಾಯ್ಕರ, ಪೂಜಾ ಮೆಣಸಿನಕಾಯಿ, ತುಳಸಿಕಾಂತ ಖೋಡೆ, ಬಾಷಾಸಾಬ ಮುದ್ಗಲ್, ಶಿವಶಂಕರ ಕಲ್ಲೂರ, ರಮೇಶ ಹೆಬ್ಬಳ್ಳಿ, ಶ್ರೀಶೈಲ ಮೂಲಿಮನಿ, ಶ್ರೀಕಾಂತ ತೇಲಗರ, ಪರ್ವೇಜ ಕಟ್ಟಿಮನಿ, ಹನುಮಂತಪ್ಪ ಕಲ್ಲವಡ್ಡರ, ಮಹಾಬಲೇಶ್ವರ ಮಾಸನಕಟ್ಟಿ, ಅಲ್ತಾಫ ನದಾಫ, ಮಲ್ಲಿಕಾರ್ಜುನ ಗುಡದೂರ, ಉಪಸ್ಥಿತರಿದ್ದರು.