ಜಿಲ್ಲೆ

ಸಿಎಂ,ದದ್ದಲ್​ ರಾಜೀನಾಮೆ ನೀಡಲಿ

ಕೊಪ್ಪಳ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187ಕೋಟಿ ರೂ. ಹಗರಣದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್​ ರಾಜೀನಾಮೆ ನೀಡುವಂತೆ ಜೆಡಿಎಸ್​ ರಾಜ್ಯ ಯುವ ಘಟಕ ಕಾರ್ಯಾಧ್ಯಕ್ಷ ರಾಜು ನಾಯಕ ಒತ್ತಾಯಿಸಿದರು.

ಬಡ ಸಮುದಾಯಕ್ಕೆ ಸೇರಬೇಕಾದ ಕೋಟ್ಯಂತರ ರೂ. ಹಣವನ್ನು ಚುಣಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಇಡಿ ತನಿಖೆಯಲ್ಲಿ ಇದು ಬಯಲಾಗಿದೆ. ಮದ್ಯ, ಕಾರು ಖರೀದಿಗೆ ಹಣಬಳಕೆ ಆಗಿದೆ. ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್​ ತಾವು ತಪು$್ಪ ಮಾಡಿಲ್ಲ ಎನ್ನುತ್ತಿದ್ದಾರೆ. ಎಸ್​ಐಟಿ ಮುಂದೆ ಶರಣಾಗಿದ್ದಾರೆ. ಇವರಿಗೆ ಸಮುದಾಯ ಜನರ ಬಗ್ಗೆ ಕಾಳಜಿ ಇಲ್ಲ. ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಇಷ್ಟೊಂದು ಗಂಭೀರ ಆರೋಪ ಬಂದರೂ ಸಿಎಂ ದದ್ದಲ್​ ರಾಜೀನಾಮೆ ಪಡೆದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಕೊಳ್ಳೆ ಹೊಡೆದ ಹಣದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅಹಿಂದ ವರ್ಗದ ನಾಯಕನೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ನೈತಿಹ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಕ್ರಮ ಕುರಿತು ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು. ದದ್ದಲ್​ ರಾಜೀನಾಮೆ ನೀಡದಿದ್ದಲ್ಲಿ ಜೆಡಿಎಸ್​ನಿಂದ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಜೆಡಿಎಸ್​ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ಡಂಬ್ರಳ್ಳಿ, ಜಿ.ಪ್ರ ಕಾರ್ಯದರ್ಶಿ ಶರಣಪ್ಪ ಜಡಿ, ಗಂಗಾವತಿ ತಾಲೂಕು ಅಧ್ಯಕ್ಷ ರಿಯಾಜ್​ ಅಹ್ಮದ್​, ಮುಖಂಡರಾದ ಮಂಜುನಾಥ ಸೊರಟೂರು, ಶ್ರೀನಿವಾಸ ಪೂಜಾರ, ಮಂಜುನಾಥ ಪಾಟೀಲ್​ ಇದ್ದರು.