ಜಿಲ್ಲೆ

ಜೆಡಿಎಸ್ ತೊರೆದು ಬಿಜೆಪಿ ಸೇರಿದ ಕಡೂರು ಪಿಕಾರ್ಡ್ ಬ್ಯಾಂಕ್ ನಿರ್ದೇಶಕರು

Chikkamagaluru

ಕಡೂರು: ಹತ್ತಾರು ವರ್ಷಗಳಿಂದ ಜೆಡಿಎಸ್​ನ ನಿಷ್ಟಾವಂತ ಮುಖಂಡರಾಗಿ ಗುರುತಿಸಿಕೊಂಡಿದ್ದ ಪಿಕಾರ್ಡ್ ಬ್ಯಾಂಕ್​ನ ಮಾಜಿ ಅಧ್ಯಕ್ಷ ಸಾಣೆಹಳ್ಳಿ ವಿರೂಪಾಕ್ಷಪ್ಪ ಮತ್ತು ಚಟ್ನಹಳ್ಳಿ ಕಲ್ಲೇಶಪ್ಪ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ದೇವಾನಂದ ನೇತೃತ್ವದಲ್ಲಿ ಸೋಮವಾರ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಕಚೇರಿಯಲ್ಲಿ ಜೆಡಿಎಸ್ ಮುಖಂಡರನ್ನು ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ದೇವಾನಂದ್, ಬಿಜೆಪಿಯ ಶಿಸ್ತು, ತತ್ವ, ಪ್ರಮಾಣಿಕತೆ ದೃಢ ನಾಯಕತ್ವ ಹಾಗೂ ಶಾಸಕ ಬೆಳ್ಳಿಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಪಿಕಾರ್ಡ್ ಬ್ಯಾಂಕ್ ಮತ್ತು ಕಡೂರು ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದರು.

ವಿರೂಪಾಕ್ಷಪ್ಪ ಮಾತನಾಡಿ, ನಾವಿಬ್ಬರೂ ಪಿಕಾರ್ಡ್ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡಿದ್ದೇವೆ. ಸಹಕಾರ ಕ್ಷೇತ್ರವನ್ನು ಬಲಪಡಿಸಲು ಯಾವುದೇ ಆಸೆ,ಆಮಿಷಕ್ಕೆ ಒಳಗಾಗದೆ ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ ಎಂದು ಹೇಳಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಬಿ.ಸೋಮೇಶ್, ಜಿಪಂ ಸದಸ್ಯ ಮಹೇಶ್​ಒಡೆಯರ್, ಎಚ್.ಎಂ.ರೇವಣ್ಣಯ್ಯ, ದೇವರಾಜು, ಶಾಮಿಯಾನ ಚಂದ್ರು, ಸತೀಶ್, ಮಚ್ಚೇರಿ ಓಂಕಾರಪ್ಪ, ಎ.ಮಣಿ, ಪುಷ್ಪಾ ಲತಾಸೋಮೇಶ್, ಹುಲ್ಲೇಹಳ್ಳಿ ಲಕ್ಷ್ಮಣ್ ಮತ್ತಿತರರು ಇದ್ದರು.