ಜಿಲ್ಲೆ

ಎನ್‌ಡಿಎ ಜತೆ ಜೆಡಿಎಸ್‌ ಸೇರಿರುವುದು ಸ್ವಾಗತಾರ್ಹ-ಗೋವಾ ಸಚಿವ ಫಳದೇಸಾಯಿ

ಕಾರವಾರ:ಎನ್‌ಡಿಎ ಜತೆ ಜೆಡಿಎಸ್ ಮೈತ್ರಿಯನ್ನು ಸ್ವಾಗತಿಸುತ್ತೇನೆ ಎಂದು ಗೋವಾ ಸಮಾಜ ಕಲ್ಯಾಣ ಸಚಿವ ಸುಭಾಷ ಫಳದೇಸಾಯಿ ಹೇಳಿದರು.
ನಗರದ ಮಾರುತಿ ದೇವಸ್ಥಾನದ ಎದುರು ಪೂಜಿಸಲ್ಪಡುತ್ತಿರುವ 50 ನೇ ವರ್ಷದ ಸಾರ್ವಜನಿಕ ಗಣೇಶ `ಕಾರವಾರ ಚಾ ರಾಜಾ' ಮೂರ್ತಿಗೆ ಭಾನುವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕರ್ನಾಟಕ ಬಿಜೆಪಿ ಸರ್ಕಾರ ಇಲ್ಲ. ಎಲ್ಲವೂ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಇಲ್ಲಿನ ಸರ್ಕಾರ ಸರಿಯಾಗಿಲ್ಲ ಎಂದು ಜೆಡಿಎಸ್ ನಾಯಕರಿಗೆ ಅನಿಸಿದೆ ಅವರು ನರೇಂದ್ರ ಮೋದಿ ಅವರ ನಾಯಕತ್ವದ ಎನ್‌ಡಿಎ ಒಕ್ಕೂಟವನ್ನು ಒಪ್ಪಿಕೊಂಡಿದ್ದಾರೆ. ಪಕ್ಕದ ರಾಜ್ಯದವರಾಗಿ ನಮ್ಮ ಸಿಎಂ ಹಾಗೂ ಬಿಜೆಪಿ ನಾಯಕ ಪ್ರಮೋದ ಸಾವಂತ ಅವರು ಜೆಡಿಎಸ್-ಎನ್‌ಡಿಎ ಮೈತ್ರಿ ಮಾತುಕತೆಯ ನೇತೃತ್ವ ವಹಿಸಿರುವುದು ಸ್ವಾಗತದ ವಿಷಯ.

ಎರಡೂ ರಾಜ್ಯಗಳ ದೊಡ್ಡ ನಾಯಕರು ಒಟ್ಟಿಗೆ ಸೇರುವುದರಿಂದ ಸಾಕಷ್ಟು ಬದಲಾವಣೆ ಆಗುತ್ತದೆ. ಈ ಮೈತ್ರಿಯ ಅವಶ್ಯಕತೆ ಇತ್ತು ಎಂದರು. ಕರ್ನಾಟಕ ಗೋವಾ ನಡುವೆ ಇರುವ ಮಹದಾಯಿ ವಿವಾದವನ್ನು ನಾವು ಯಾವುದೇ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರದೇ ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದರು.

ವಿಡಿಯೋ ಇಲ್ಲಿ ನೋಡಿ: https://youtu.be/O35F2YmhSkE?si=y-QGRkB4AzjbTAYb