ಮುಳಬಾಗಿಲು: ಡಿಸಿಸಿ ಬ್ಯಾಂಕ್, ಕೋಲಾರ ಹಾಲು ಒಕ್ಕೂಟ ಎರಡು ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗಾಗಿ ಹೊಸ ಸಮನ್ವಯ ವೇದಿಕೆ ಮೂಲಕ ಈ ಬಾರಿ ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿದರು.
ತಾಲೂಕಿನ ಶಿನಿಗೇನಹಳ್ಳಿಯ ಅವನಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜೆಡಿಎಸ್ ಮುಖಂಡ ಜಿ. ಆನಂದರೆಡ್ಡಿ ನಿವಾಸದಲ್ಲಿ ಮುಳಬಾಗಿಲು ತಾಲೂಕಿನ ಕೋಲಾರ ಒಕ್ಕೂಟದ ನಿರ್ದೇಶಕ ಎರಡು ಸ್ಥಾನಗಳ ಅಭ್ಯರ್ಥಿಗಳನ್ನು ಘೋಷಿಸಿ ಮಾತನಾಡಿದ ಅವರು, ತಾಲೂಕಿನ ಪೂರ್ವ ಕ್ಷೇತ್ರಕ್ಕೆ ಕಾಡೇನಹಳ್ಳಿ ಕೆ.ಎನ್.ನಾಗರಾಜ್, ಪಶ್ಚಿಮ ಕ್ಷೇತ್ರಕ್ಕೆ ಬಿಸನಹಳ್ಳಿ ಬಿ.ವಿ.ಸಾಮೇಗೌಡ ಅವರು ಅಧಿಕೃತ ಅಭ್ಯರ್ಥಿಗಳನ್ನಾಗಿ ಪಕ್ಷದ ಸಮನ್ವಯ ಸಮಿತಿ ಸದಸ್ಯರು ತೀಮಾರ್ನ ಮಾಡಿದ್ದಾರೆ. ಇಬ್ಬರು ನಿರ್ದೇಶಕರಾಗಿ ಗೆಲ್ಲಲಿದ್ದಾರೆ. ಹಾಲು ಒಕ್ಕೂಟ ಅಧ್ಯಕ್ಷ ಸ್ಥಾನವು ಜ್ಯಾತ್ಯಾತಿತ ಜನತಾದಳದ ವಶವಾಗಲಿದೆ ಎಂದರು.
ಪಕ್ಷದ ಮುಖಂಡ ಬಲ ಶೆಟ್ಟಹಳ್ಳಿ ಬಿ.ಎಂ.ವೆಂಕಟರಮಣಗೌಡ ನಡುವೆ ಸ್ಪರ್ಧಿಸಲು ಪೈಪೋಟಿ ಏರ್ಪಟ್ಟಿತ್ತು, ಭಾನುವಾರ ರಾತ್ರಿ ಶೆಟ್ಟಹಳ್ಳಿ ಗೌಡರು ಪಕ್ಷದ ಹಿತದೃಷ್ಟಿಯಿಂದ ಸ್ಪರ್ಧೆಯಿಂದ ಹಿಂದೆ ಸರಿಯಲು ಒಪ್ಪಿದ ಕಾರಣ ಒಮ್ಮತ ಆಯ್ಕೆ ಮಾಡಿದ್ದು, ಸಾಮೇಗೌಡ ಗೆಲುವು ಖಚಿತ. ಮುಳಬಾಗಿಲು ಶ್ರೀನಿವಾಸಪುರ ಕೋಲಾರ ಮಹಿಳಾ ನಿರ್ದೇಶಕ ಸ್ಥಾನದಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲುವು ಕಾಣಲಿದ್ದಾರೆ ಅದನ್ನು ಪಕ್ಷದ ವರಿಷ್ಠರು ನಮ್ಮ ಕುಟುಂಬದಿಂದಲೇ ಸ್ಪರ್ಧಿಸಲು ಒತ್ತಡ ತರುತ್ತಿದ್ದಾರೆ. ಆದರೆ ಬೇರೆ ಕಡೆ ಅವಕಾಶ ಮಾಡಿಕೊಡಲು ಸೂಚಿಸಿದ್ದೇನೆ ಎಂದರು.
ಅವನಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ. ಆನಂದರೆಡ್ಡಿ ಮಾತನಾಡಿ, ಡಿಸಿಸಿ ಬ್ಯಾಂಕ್ನಿಂದ ನಿರ್ದೇಶಕ ಸ್ಥಾನ ಗೆಲುವಿನಲ್ಲೂ ಮೇಲೈ ಸಾಧಿಸಲು ಶ್ರಮವಹಿಸಲಾಗಿದೆ. ಕಳೆದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ನಲ್ಲಿ ಮೊಸ ಮಾಡಿದರು. ಅದಕ್ಕೆ ತಕ್ಕ ಪ್ರತಿಫಲ ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಇದ್ದ ಬಹುಮತ ಜೆಡಿಎಸ್ ಕಡೆ ಬದಲಾವಣೆ ಮಾಡಿ ಗೆಲುವು ಕಾಣಲಾಗಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್. ನಾಗರಾಜ್ ಮಾತನಾಡಿ, ಈಗಾಗಲೇ ತಾಲೂಕಿನಿಂದ ಮೂರು ಬಾರಿ ಹಾಲು ಒಕ್ಕೂಟದ ನಿರ್ದೇಶಕನಾಗಿ ಆಯ್ಕೆಯಾಗಿ ಒಂದು ಬಾರಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ತಾಲೂಕಿನಿಂದ 2 ಕ್ಷೇತ್ರಗಳು ವಿಂಗಡಣೆಯಾಗಿದ್ದು, ಪಕ್ಷದ ವರಿಷ್ಠರು ಮತ್ತು ಡೇರಿ ಮತದಾರ ಪ್ರತಿನಿಧಿಗಳ ಒತ್ತಡದ ಮೇರೆಗೆ 4ನೇ ಬಾರಿ ಸ್ಪರ್ಧೆ ಮಾಡುತ್ತಿದ್ದು, ಗೆಲುವು ಸುಲಭ ಸಾಧ್ಯ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು.
ಮುಖಂಡರಾದ ಬಲಶೆಟ್ಟಹಳ್ಳಿ ಬಿ.ಎಂ.ವೆಂಕಟರಮಣಗೌಡ, ನಗವಾರ ಎನ್. ಆರ್. ಸತ್ಯಣ್ಣ, ಗೊಲ್ಲಹಳ್ಳಿ ಪ್ರಭಾಕರ್, ಜಿ.ಎಸ್.ಜಗದೀಶ್, ಲಕ್ಷಿ$್ಮನಾರಾಯಣ, ವೈ. ಸೋಮಶೇಖರ್, ಶಶಿಕಾಂತ್, ಪ್ರಶಾಂತ್ ಇದ್ದರು.
ಜೆಡಿಎಸ್ ಶಕ್ತಿ ತೋರಿಸುತ್ತೇವೆ
ಮುಳಬಾಗಿಲು ನಗರಸಭೆಯಲ್ಲಿ ಜೆಡಿಎಸ್ಗೆ ಸ್ಪಷ್ಟ ಬಹುಮತ ಇದ್ದರೂ, ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನಾಲ್ವರು ಸದಸ್ಯರನ್ನು ಸೆಳೆದುಕೊಂಡು ಕಾಂಗ್ರೆಸ್ ಅಧಿಕಾರದ ಚುಕ್ಕಿಣಿ ಹಿಡಿಯಿತು. ಅದನ್ನೇ ತಿರುಗುಬಾಣವಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾಡಿ ತೋರಿಸಿದ್ದೇವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಯಲ್ಲೂ ನಮ್ಮತಂತ್ರ ಶಕ್ತಿ ಏನೆಂಬುದು ತೋರಿಸುತ್ತಿವೆ ಎಂದು ಸಮೃದ್ಧಿ ಮಂಜುನಾಥ್ ಹೇಳಿದರು.
ಬೆಟ್ಟಿಂಗ್ ವಿರುದ್ಧ ಕ್ರಮವಾಗಲಿ
ತಾಲೂಕಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಐಪಿಎಲ್ ಪ್ರಾರಂಭವಾಗುವ ಮುನ್ನವೇ ಪೊಲೀಸ್ ಇಲಾಖೆಗೆ ಎಚ್ಚೆತ್ತುಕೊಳ್ಳಿ ಎಂದು ಎಚ್ಚರಿಸುತ್ತಲೇ ಇದೆ. ಈ ಮಧ್ಯೆ ನಂಗಲಿ ಗ್ರಾಮದ ಯುವಕ ಸುನಿಲ್ ಕುಮಾರ್ ಬೆಟ್ಟಿಂಗ್ನಿಂದ ನಷ್ಟ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಮಗ್ರ ತನಿಖೆ ಮಾಡಬೇಕು. ಯುವಕರಲ್ಲೂ ವಿನಮ್ರದಿಂದ ಪ್ರಾರ್ಥನೆ ಮಾಡಿಕೊಂಡೆ ಬೇಡ, ಈ ಬೆಟ್ಟಿಂಗ್ ಸಹವಾಸದಿಂದ ದೂರವಿರಿ ಎಂದು. ಆದರೆ ಅವರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರೋದು ಬೇಸರ ತರಿಸಿದೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.