ಜಿಲ್ಲೆ

ಬಿಜೆಪಿ ಜತೆ ಸೇರಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಜೆಡಿಎಸ್

ಮಾದೇಶ್ ತಿ.ನರಸೀಪುರ

ನಾಗಮಂಗಲ: ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ನಂತರ ಜೆಡಿಎಸ್ ಪಕ್ಷ ಮಾಯವಾಗುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಲೇವಡಿ ಮಾಡಿದರು.

ಹೊಂದಾಣಿಕೆ ಮಾಡಿಕೊಳ್ಳುವ ಮುನ್ನ ಜೆಡಿಎಸ್‌ನಲ್ಲಿದ್ದ ಬಿಗಿ ಈಗ ಇಲ್ಲದಂತಾಗಿದೆ. ಅಸ್ತಿತ್ವ ನಿಧಾನವಾಗಿ ಕಡಿಮೆಯಾಗುತ್ತಿದೆ. ಜಿಲ್ಲೆಯ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ಸಮಸ್ಯೆಯಿಂದ ಜಿಲ್ಲೆಗೆ ಭೇಟಿ ಕೊಡಲು ಸಾಧ್ಯವಾಗುತ್ತಿಲ್ಲವೆಂಬ ಮಾತು ಕೇಳಿಬರುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುರಸಭೆ ಮಾಜಿ ಸದಸ್ಯ ಲಾರಿ ಚನ್ನಪ್ಪ, ತಾಪಂ ಮಾಜಿ ಸದಸ್ಯ ಹೇಮರಾಜು, ಮುಖಂಡರಾದ ಬಿದರಕೆರೆ ಮಂಜೇಗೌಡ, ಶೇಖ್ ಅಹಮ್ಮದ್, ಚಿಣ್ಯ ಕರಿಯಣ್ಣ, ಸೋಮಶೇಖರ್, ತೊಳಲಿ ಕೃಷ್ಣಮೂರ್ತಿ, ಸಂತೋಷ್, ಮರೀಗೌಡ, ವಕೀಲ ಟಿ.ಕೆ.ರಾಮೇಗೌಡ ಇದ್ದರು.