ರಾಯಚೂರು ಜೆಡಿಎಸ್ ಪಕ್ಷದವರು ತಾವು ಅಽಕಾರ ಅನುಭವಿಸುವಾಗ ಕಾಂಗ್ರೆಸ್ ಬೇಕು, ಅಽಕಾರ ಹೋದ ಮೇಲೆ ಕಾಂಗ್ರೆಸ್ ಸಾಕಪ್ಪ -ಸಾಕು ಎಂದು ಹೇಳುವ ಸಾಕಷ್ಟು ಜನರನ್ನು ನೋಡಿದ್ದೇವೆಂದು ಜಿ¯್ಲÁ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲï ವ್ಯಂಗ್ಯವಾಗಿ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸಾಕಪ್ಪ ಸಾಕು ಅನ್ನೋ ಘೋಷ ವಾಕ್ಯ ಜೆಡಿಎಸ್ ಹೋರಾಟಕ್ಕೆ ವ್ಯಂಗವಾಡಿದರು. ಇದರ ಬಗ್ಗೆ ನಾನು ಏನು ಹೇಳಬೇಕು. ಈ ಹಿಂದೆ ಜೆಡಿಎಸ್ ಅವರದ್ದು ಸರ್ಕಾರವಿತ್ತು. ಅವರಿಗೆ ನಾವು ಎರಡು ಸಾರಿ ಬೆಂಬಲ ನೀಡಿ ಸರ್ಕಾರ ಜಾರಿ ಮಾಡಲಾಗಿತ್ತು. ನಮ್ಮ ಬೆಂಬಲದಿAದ ಎಚ್.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿದ್ದಾರೆ.
ಇವರಿಗೆ ಅಽಕಾರ ಇz್ದÁಗ ಕಾಂಗ್ರೆಸ್ ಬೇಕು, ಅಽಕಾರ ಇಲ್ಲದಿz್ದÁಗ ಸಾಕಪ್ಪ ಸಾಕು ಎಂದು ಹೇಳುತ್ತಿದ್ದು ಇವರಿಗೆ ಯಾವುದೇ ವಿಷಯದ ಕುರಿತು ಮಾತನಾಡುವ ನೈತಿಕತೆ ಇಲ್ಲವೆಂದು ವ್ಯಂಗ್ಯವಾಡಿದರು.
ಜÁತಿಗಣತಿ ವಿಚಾರದಲ್ಲಿ ಏನೂ ಗೊಂದಲವಿಲ್ಲ, ಕ್ಯಾಬಿನೆಟïನಲ್ಲಿ ಎಲ್ಲರಿಗೆ ತಿಳಿಸಲಾಗಿದೆ. ಮೊದಲ ಬಾರಿಗೆ ಲಕೋಟೆಯನ್ನು ತೆರೆಯಲಾಗಿದೆ ಹಾಗಾಗಿ ಅದರ ಬಗ್ಗೆ ಮಾಹಿತಿ ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಕ್ಯಾಬಿನೆಟïನಲ್ಲಿ ಚರ್ಚೆ ಮಾಡೋಣ ಎಲ್ಲರೂ ಓದಿಕೊಂಡು ಬನ್ನಿ ಎಂದಿz್ದÁರೆ. ಏ.೧೭ ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುತ್ತೆ ಎಂದರು.
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಕುರಿತು ರಾಯರೆಡ್ಡಿಯವರು ಈಗಾಗಲೇ ಇದಕ್ಕೆ ಸ್ಪಷ್ಟಿಕರಣ ಕೊಟ್ಟಿz್ದÁರೆ. ಅವರು ವಾಖ್ಯಾನ ಮಾಡುವಾಗ ತಪ್ಪಾಗಿದೆ ಎಂದಿz್ದÁರೆ. ಬಹುಶಃ ಹಿಂದಿನ ಸರ್ಕಾರದ ಬಗ್ಗೆ ಅವರು ಮಾತನಾಡುತ್ತಿದ್ದರು ಅನಿಸುತ್ತೆ ಎಂದರು.