ಜಿಲ್ಲೆ

ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಆಸೆ, ಆಮಿಷಕ್ಕೆ ಬಲಿಯಾಗಿದೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಟೀಕೆ

ಮೈಸೂರು: ಆಸೆ ಆಮಿಷಕ್ಕೆ ಬಲಿಯಾಗಿ ಮೇಯರ್ ಹಾಗೂ ಉಪಮೇಯರ್ ಸ್ಥಾನವನ್ನು ಜೆಡಿಎಸ್ ಬಿಜೆಪಿಗೆ ಬಿಟ್ಟುಕೊಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಟೀಕಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹೆಸರಿಗಷ್ಟೇ ಜಾತ್ಯಾತೀತ, ಅವರು ಜಾತ್ಯಾತೀತ ತತ್ವದ ವಿರೋಧಿಗಳಾಗಿದ್ದಾರೆ. ಜೆಡಿಎಸ್ ಉಪಮೇಯರ್ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗಲು ಜೆಡಿಎಸ್‌ನವರೇ ಕಾರಣ. ಷಡ್ಯಂತ್ರ ಮಾಡಿ ನಾಮಪತ್ರ ತಿರಸ್ಕೃತ ಆಗುವಂತೆ ಮಾಡಿದ್ದಾರೆ. ಬಿಜೆಪಿ ಅಪರೇಷನ್ ಕಮಲ ಮಾಡಲು ಮೊದಲು ಮುಂದಾಗಿತ್ತು. ಇದೀಗ ಜೆಡಿಎಸ್ ಜತೆ ಕೈ ಜೋಡಿಸಿ ಅಧಿಕಾರ ಪಡೆದುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಜನರೇ ಇವರಿಗೆ ಉತ್ತರ ನೀಡುತ್ತಾರೆ ಎಂದರು.