ಜಿಲ್ಲೆ

ರೈತರ ಯುವಕರ ಆತ್ಮಹತ್ಯೆಯ ಜೊತೆಗೆ ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ : ವೆಂಕನಗೌಡ ಗೋವಿಂದಗೌಡ್ರ

Gadag - Shivanand Hiremath

ಗದಗ: ರಾಜ್ಯದಲ್ಲಿ ಭ್ರಷ್ಟಾಚಾರ ಅರಾಜ್ಯ ಕಥೆ ತಾಂಡವ ಆಡುತ್ತಿದೆ ಜನರಿಗೆ ಈ ಸರ್ಕಾರವನ್ನು ಏತಕ್ಕಾಗಿ ತಂದೆಯು ಎಂಬ ಹತಾಶೆ ಉಂಟಾಗಿದೆ. ರಾಜ್ಯದಲ್ಲಿ ಈಗಾಗಲೇ ರೈತರ ಆತ್ಮಹತ್ಯೆ ಹೆಚ್ಚಾಗಿದ್ದು ಯುವಕರು ಕೂಡ ಕೆಲಸವಿಲ್ಲದೆ ಸ್ವಯಂ ಉದ್ಯೋಗಕ್ಕೆ ಯಾರ ಸಹಾಯವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಗ ಅದೇ ಸಾಲಿಗೆ ಸರ್ಕಾರಿ ನೌಕರರು ಕೂಡ ಸೇರಿದ್ದಾರೆ ಭ್ರಷ್ಟಾಚಾರ ಎಲಿಮೀರಿ ಹೋಗಿದೆ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ದುಡ್ಡು ಮಾಡುವುದು ಒಂದೇ ಕಾಯಕ ಎಂದು ಈ ಸರ್ಕಾರ ಪರಿಗಣಿಸಿದಂತಿದೆ. ಮುಖ್ಯಮಂತ್ರಿಗಳಿಗೆ ರಾಜ್ಯದ ಜನತೆಯ ಬಗ್ಗೆ ಕಾಳಜಿ ಕಳಕಳಿ ಇದ್ದರೆ ತಕ್ಷಣ ಸಚಿವರನ್ನು ವಜಾ ಮಾಡಬೇಕು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಇಂತಹದೇ ಪ್ರಕರಣದಲ್ಲಿ ಈ ಹಿಂದೆ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಾಗ ಸಚಿವರ ಹೆಸರನ್ನು ಉಲ್ಲೇಖಿಸಿದಾಗ ಇದೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಏರ್ ಧೋನಿಯಲ್ಲಿ ಈಶ್ವರಪ್ಪನವರ ರಾಜೀನಾಮೆಗೆ ಒತ್ತಾಯಿಸಿದರು, ಅವರು ಒತ್ತಡಕ್ಕಾಗಿಯೂ ಅಥವಾ ನೈತಿಕ ನೈತಿಕತೆಗಾಗಿಯೂ ರಾಜೀನಾಮೆಯನ್ನು ಸಲ್ಲಿಸಿದರು. ಈಗ ಅದನ್ನೇ ಈ ಸಿದ್ದರಾಮಯ್ಯ ಸರ್ಕಾರ ಮಾಡಬೇಕಿದೆ ಸಚಿವರು ರಾಜೀನಾಮೆ ಕೊಟ್ಟು ತಣಿಕೆಗೆ ಸಹಕರಿಸದಿದ್ದರೆ ಅವರನ್ನು ವಜಾ ಮಾಡಬೇಕು ಎಂದು ಜೆಡಿಎಸ್ ಪಕ್ಷದ ರಾಜ್ಯದ ವಕ್ತಾರ ವೆಂಕನಗೌಡ ಅರ್ ಗೋವಿಂದಗೌಡ್ರ ಒತ್ತಾಯಿಸಿದ್ದಾರೆ. ಈ ಸರಕಾರ ಎತ್ತಸಾಗಿದೆ ಎಂಬುವುದು ಯಾರಿಗೂ ತಿಳಿಯುತ್ತಿಲ್ಲ. ಇಷ್ಟೊಂದು ದೊಡ್ಡ ಮಟ್ಟದ ಹಗರಣವನ್ನು ರಾಜ್ಯ ಸರ್ಕಾರ ನಗುವಾಗಿ ಪರಿಗಣಿಸಿರುವುದು ನಾಚಿಕೆಗೇಡಿನ ಸಂಗತಿ, ಮಾತು ಎತ್ತಿದರೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ವೇದ ಸಿದ್ಧಾಂತಗಳನ್ನು ಮಾತನಾಡುತ್ತಿರುವವರಿಗೆ ಈಗ ನಾಚಿಕೆ ಮಾನ ಮರ್ಯಾದೆ ಎಲ್ಲಿದೆ ಎಂದು ವೆಂಕನಗೌಡ ಅರ್ ಗೋವಿಂದಗೌಡ್ರ ಪ್ರಶ್ನಿಸಿದ್ದಾರೆ. ಈ ಸರ್ಕಾರದ ಪಾಪದ ಕೊಡ ತುಂಬುತ್ತಿದೆ ಈಗಾಗಲೇ ಯುವಕರ ರೈತರ ಕ್ಷಣಗಳ ಮೇಲೆ ಈ ಸರಕಾರ ನಡೆಯುತ್ತಿದ್ದು ಈಗ ಸರ್ಕಾರಿ ನೌಕರರು ಕೂಡ ಈ ಸಾಲಿಗೆ ಸೇರಿದ್ದಾರೆ ಇನ್ನೆಷ್ಟು ಬಲಿಗಳನ್ನು ಈ ಸರ್ಕಾರ ತೆಗೆದುಕೊಳ್ಳುತ್ತದೆ ಎಂಬ ಜನರಿಗೆ ಚಿಂತೆಯಾಗಿದೆ. ಈ ಪ್ರಕರಣದಲ್ಲಿ ಸರ್ಕಾರ ನಿಷ್ಕಾಳಜಿ ವಹಿಸದೆ ತಕ್ಷಣ ಸಚಿವರನ್ನು ವಜಾ ಮಾಡಬೇಕು ಹಾಗೂ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಇಲ್ಲವಾದಲ್ಲಿ ರಾಜ್ಯದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯದ ವಕ್ತಾರ ವೆಂಕನಗೌಡ ಅರ್ ಗೋವಿಂದಗೌಡ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಕಾರಣಗಳಿಗೆ ವರ್ಗಾಯಿಸಿಕೊಂಡು ಅಪರಾಧ ಎಸಿಗಿದ ಈ ಸರ್ಕಾರ ಮತ್ತೆ ದಲಿತರ ಕಲ್ಯಾಣಕ್ಕಾಗಿ ಇಟ್ಟ ಈ 189 ಕೋಟಿ ರೂಪಾಯಿಗಳ ಹಣವನ್ನು ಅನಧಿಕೃತವಾಗಿ ವರ್ಗಾಯಿಸಿಕೊಂಡು ಸಚಿವರು ಹಾಗೂ ಅವರ ಸಹಚರರ ವಿರುದ್ಧ ಮಾಡಿ ತಕ್ಷಣ ತನಿಖೆಗೆ ಒಳಪಡಿಸಬೇಕು ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಸಂಶಿ, ಜಿಲ್ಲಾ ಅಧ್ಯಕ್ಷ ಜೋಸೆಫ ಉದೋಜಿ, ಜಿಲ್ಲಾ ಜೆಡಿಎಸ್ ವಕ್ತಾರ ಜೆ ಕೆ ಕೊಳ್ಳಿಮಠ, ತಾಲೂಕ ಅಧ್ಯಕ್ಷ ಬಸವರಾಜ ಅಪ್ಪಣ್ಣವರ, ಪ್ರಫುಲ್ ಪುನೀಕರ್ ಕೆ. ಎಫ್ ದೊಡ್ಮನಿ ಎಂ ಎಸ್ ಪರ್ತಗೌಡರ, ಡಾ. ಶರಣಪ್ಪ ಹೂಗಾರ್, ತಿಪ್ಪಣ್ಣ ಹುಡೆದ, ಸಿದ್ದಣ್ಣ ಕುರ್ತುಕೋಟಿ, ಲಿಂಗರಾಜ ಪ್ಯಾಟಿ, ವಿನಾಯಕ್ ಪರ್ವತ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ದಿಬ್ಬ್ರಮೆ ವ್ಯಕ್ತಪಡಿಸಿದ್ದಾರೆ.