ಜಿಲ್ಲೆ

ಶಾಶ್ವತ ವಿದ್ಯುತ್ ಸೌಲಭ್ಯ ಒದಗಿಸಲು ಜೆಡಿಎಸ್ ಆಗ್ರಹ

ನವೀನ ಬಿ.ಎಂ

ಶಿವಮೊಗ್ಗ: ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟುಕೊಂಡು ಆಶ್ರಯ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ನಿರಾಕರಿಸುತ್ತಿದೆ. ಶಾಶ್ವತ ವಿದ್ಯುತ್ ಸೌಲಭ್ಯದಿಂದ ಆಶ್ರಯ ಲಾನುಭವಿಗಳು ವಂಚಿತರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಗಂಧದಮನೆ ನರಸಿಂಹ ಆರೋಪಿಸಿದರು.

ಮಹಾನಗರ ಪಾಲಿಕೆಯಿಂದ ಆಶ್ರಯ ಯೋಜನೆಯಡಿ ಪೂರ್ಣಗೊಂಡ ಮನೆಗಳಿಗೆ ಲಾನುಭವಿಗಳು ವಾಸವಾಗಿದ್ದರೂ ಸ್ವಾಧೀನ ಅನುಭವ ಪತ್ರ ಇಲ್ಲದ ಕಾರಣ ಮೆಸ್ಕಾಂ ಶಾಶ್ವತ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಅವರೆಲ್ಲರೂ ತಾತ್ಕಾಲಿಕ ವಿದ್ಯುತ್ ಸಂಪರ್ಕದಲ್ಲಿ ಮುಂದುವರಿಯುವಂತಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಕೇಳಿದರೆ ಎಲ್ಲ ಮನೆಗಳು ಪೂರ್ಣಗೊಳ್ಳದೆ ನಮಗೆ ಸ್ವಾಧೀನಾನುಭವ ಪತ್ರ ನೀಡಲು ಇನ್ನೂ ಆದೇಶ ಬಂದಿಲ್ಲ ಎನ್ನುತ್ತಿದ್ದಾರೆ. ಜನಸಾಮಾನ್ಯರು ಗೃಹಪ್ರವೇಶ ಮಾಡಿದರೂ ಪಾಲಿಕೆ ಮತ್ತು ಮೆಸ್ಕಾಂ ನೀತಿಯಿಂದ ಹೈರಾಣಾಗಿದ್ದಾರೆ. ರಾಜ್ಯ ಸರ್ಕಾರದ ಕೆಲವೊಂದು ಆದೇಶಗಳು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಿದ್ದು, 20್ಡ30ರಲ್ಲಿ ಮನೆ ಕಟ್ಟಿದರೆ ಸೆಟ್ ಬ್ಯಾಕ್ ಬಿಟ್ಟಿಲ್ಲ ಎಂಬ ಕಾರಣಕ್ಕೆ ಯೋಜನಾ ಪ್ರಾಧಿಕಾರದಿಂದ ಅದು ಸಿಂಧು ಎಂದು ಪತ್ರ ನೀಡುವುದಿಲ್ಲ. ನಿಗದಿತ ಪ್ರಾಧಿಕಾರದ ಅನುಮತಿ ಇಲ್ಲದೇ, ಇವರಿಗೆ ಯಾವುದೇ ಸಾಲವಾಗಲಿ, ಇನ್ನಿತರ ಸೌಲಭ್ಯಗಳು ಸಿಗುವುದಿಲ್ಲ ಎಂದರು.

ಪ್ರಮುಖರಾದ ದಯಾನಂದ್, ಚಾಮುಂಡಿ, ಲೋಹಿತ್, ಗೋಪಿ ಸುದ್ದಿಗೋಷ್ಠಿಯಲ್ಲಿದ್ದರು.