ಮಳವಳ್ಳಿ: ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅನಂತ್‌ರಾಮ್ ವೃತ್ತದಲ್ಲಿ ಸಂಭ್ರಮಾಚರಿಸಿದರು.
ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದ ನಂತರ ದೊಡ್ಡಕೆರೆ ಸಮೀಪವಿರುವ ದಂಡಿನ ಮಾರಮ್ಮ ದೇವಸ್ಥಾನಕ್ಕೆ ತೆರಳಿ 101 ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು. ಪುರಸಭೆ ಸದಸ್ಯ ಟಿ.ನಂದಕುಮಾರ್ ಮಾತನಾಡಿ, ಸದಾ ಜನಪರ, ಸಮಾಜಮುಖಿ ಚಿಂತನೆಗಳನ್ನು ಹೊಂದಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಮತದಾರರು ಅಭೂತಪೂರ್ವವಾಗಿ ಬೆಂಬಲಿಸಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ನಿರೀಕ್ಷೆಯಂತೆ ಸಚಿವರಾಗಿದ್ದು, ದೇಶದ ಅಭಿವೃದ್ಧಿ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೂ ಮುಂದಾಗಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಗಿರೀಶ್, ಕೃಷ್ಣ, ಅಂಕರಾಜು, ಚಂದ್ರು, ಕಂಬರಾಜು, ಅಕ್ಕಿ ಕೃಷ್ಣ, ಆನಂದ, ಕುಮಾರ, ಮೆಹಬೂಬ್ ಪಾಷ, ಕಾಂತರಾಜು, ಓಂ ಪ್ರಕಾಶ್ ಪಾಲ್ಗೊಂಡಿದ್ದರು.