ಮೈಸೂರು: ಅಭಿವೃದ್ಧಿಪರ ಚರ್ಚೆಗಳಲ್ಲಿ ಭಾಗಿಯಾಗದ ಬಿಜೆಪಿ ಮತ್ತು ಜೆಡಿಎಸ್ ಕೋಮು ಸೌಹಾರ್ದತೆ ಕದಡುವ ಕಾರ್ಯದಲ್ಲಿ ತೊಡಗಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೆರಗೋಡು ಧ್ವಜಸ್ತಂಭ ವಿಚಾರ ಮುಂದಿಟ್ಟುಕೊಂಡು ಶಾಂತಿ ಕದಡುವ ಕಾರ್ಯ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ಲೋಕಸಭಾ ಚುನಾವಣೆ ಸಂದರ್ಭ ಗಲಬೆ ಎಬ್ಬಿಸುವ ಉದ್ದೇಶವನ್ನು ಬಿಜೆಪಿ ಹಾಗೂ ಜೆಡಿಎಸ್ ಹೊಂದಿದೆ. ಬಿಜೆಪಿ, ಜೆಡಿಎಸ್ ಕುತಂತ್ರ ರಾಜಕಾರಣಕ್ಕೆ ತಮ್ಮ ಮಕ್ಕಳನ್ನು ಬಲಿಯಾಗದಂತೆ ಪಾಲಕರು ನೋಡಿಕೊಳ್ಳಬೇಕು. ಕರಾವಳಿಯಲ್ಲಿ ಈ ರೀತಿ ಕೋಮು ಸೌಹಾರ್ದತೆ ಕದಡುವ ಕಾರ್ಯ ನಡೆಯುತಿತ್ತು. ಇದೀಗ ಹಳೇ ಮೈಸೂರು ಭಾಗಕ್ಕೂ ವಿಸ್ತರಿಸುವ ಕಾರ್ಯ ನಡೆಯುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರಧ್ವಜದ ಮೇಲೆ ಇವರಿಗೆ ಗೌರವ ಇಲ್ಲ. ಭಗವಾಧ್ವಜವನ್ನು ಸಂಸತ್ ಭವನದ ಮೇಲೆ ಹಾರಿಸುವುದು ಇವರ ಅಜೆಂಡಾವಾಗಿದೆ. ಕೆರಗೋಡು ಗ್ರಾಮ ಪಂಚಾಯಿತಿ ನೀಡಿರುವ ಅನುಮತಿ ನಿಯಮ ಉಲ್ಲಂಘನೆ ಮಾಡಿ ಹನುಮ ಧ್ವಜವನ್ನು ಹಾರಿಸಿದ್ದಾರೆ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಂಡ್ಯದಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಬೇಕು. ಪ್ರಸ್ತುತ ಇರುವ ಪೊಲೀಸ್ ಅಧಿಕಾರಿಗಳಲ್ಲಿ ಬಿಜೆಪಿ ಮೈಂಡ್‌ಸೆಟ್ ಇದೆ. ಸೋಮವಾರ ಕಾಂಗ್ರೆಸ್ ನಾಯಕರ ಭಾವಚಿತ್ರದ ಫ್ಲೆಕ್ಸ್ ಹರಿದು ಹಾಕಿದ್ದಾರೆ. ಕುರುಬ ಸಮುದಾಯದ ಹಾಸ್ಟೆಲ್ಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೆಟೋ ಹರಿದು ಹಾಕಿದ್ದಾರೆ. ಸಿಎಂ ೆಟೊ ಹರಿಯುವಾಗ ಪೊಲೀಸರು ಎಲ್ಲಿದ್ದರು? ಬಿಜೆಪಿ ಮೈಂಡ್ ಸೆಟ್‌ನಿಂದ ಪೊಲೀಸರು ಹೊರ ಬಂದಿಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಕೆಲವು ಅಧಿಕಾರಿಗಳಿಂದ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2024ರ ೆಬ್ರವರಿಗೆ ಕುಶಾಲನಗರಕ್ಕೆ ರೈಲು ಬಂದು ನಿಲ್ಲುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಈ ಹಿಂದೆ ಹೇಳಿದ್ದರು. ಆದರೆ, ಇದೀಗ ರೈಲ್ವೆ ಹಳಿ ನಿರ್ಮಾಣಕ್ಕೆ ಸರ್ವೇ ಆರಂಭವಾಗಿಲ್ಲ ಎಂದು ಪ್ರತಾಪ್ ಸಿಂಹ ಹೇಳುತ್ತಿದ್ದಾರೆ. ಇದೀಗ ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರ ರಚನೆಗೆ ಪ್ರಯತ್ನ ನಡೆಸುತ್ತೇನೆ ಅನ್ನುತ್ತಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ರೈಲು ಬಿಡುವುದೇ ಇವರ ಕೆಲಸವಾಗಿದೆ ಎಂದು ಟೀಕಿಸಿದರು.