KOTA SHREENIVAS PUJARI 
ಜಿಲ್ಲೆ

ಮೈತ್ರಿಯಿಂದ ಬಿಜೆಪಿಗೆ ಅನುಕೂಲ:ಶ್ರೀನಿವಾಸ ಪೂಜಾರಿ

jds allaince helps bjp kota shreenivas pujari mlc

ಕೊಪ್ಪಳ: ಲೋಕಸಭೆ ಚುನಾವಣೆ ದೃಷ್ಟಿಯಿಂದ ಜಾತ್ಯಾತೀತ ಜನತಾದಳ ಪಕ್ಷದೊಂದಿಗೆ ಮಾಡಿಕೊಂಡ ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ರಾಜಕಾರಣದಲ್ಲಿ ಅನಿವಾರ್ಯ ಮತ್ತು ಅಗತ್ಯತೆ ಎಲ್ಲರಿಗೂ ಇದೆ. ಜೆಡಿಎಸ್ ಅನೇಕ ಸೋಲು, ಗೆಲುವು ಕಂಡಿದೆ. ಆದರೆ, ನಿರ್ಲಕ್ಷಿತ ಪಕ್ಷವಲ್ಲ. ಅವಶ್ಯ ಸಂದರ್ಭದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

ಪರಸ್ಪರ ಒಮ್ಮತದಿಂದ ಮೈತ್ರಿ ಮಾಡಿಕೊಂಡಿದ್ದು, ಉತ್ತಮ ಭವಿಷ್ಯವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಷ್ಟೇ ಸ್ಥಾನಗಳನ್ನು ಈ ಬಾರಿಯೂ ಗೆಲ್ಲುತ್ತೇವೆ. ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಬಲ ಸಿಗಲಿದೆ.

ರಾಷ್ಟ್ರೀಯ ವಿಷಯಗಳನ್ನು ಮುಂದಿಟ್ಟುಕೊಂಡು ಎನ್‌ಡಿಎ ಒಕ್ಕೂಟ ರಚಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವಲ್ಲಿ ಯಲ್ಲಿ ವಿಳಂಬವಾಗಿರುವುದು ನಿಜ. ಒಂದು ಹೆಜ್ಜೆ ಹಿಂದೆ ಉಳಿದಿದ್ದೇವೆಂದರೆ, ಮುಂದೆ ಮುನ್ನುಗ್ಗತ್ತೇವೆ ಎಂದರ್ಥ.

ವಿಧಾನಸಭೆ ಚುನಾವಣೆ ಮುಗಿದು ಬಹಳ ದಿನಗಳಾಗಿದ್ದು, ವಿಪಕ್ಷ ನಾಯಕನನ್ನು ಆಯ್ಕೆ ಮಾಡುವುದು ರಾಜಕೀಯ ಪಕ್ಷದ ಜವಾಬ್ದಾರಿಯೂ ಹೌದು.

ವರಿಷ್ಠರು ಶೀಘ್ರ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು. ವಿಪ ಸದಸ್ಯೆ ಹೇಮಲತಾ ನಾಯಕ ಇದ್ದರು.