ಮೂಡಿಗೆರೆ ಜೆಸಿಐ ಪ್ರೇರಣಾ ಸಪ್ತಾಹ ಸಮಾರೋಪದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಟಿ.ಎನ್.ದೇವರಾಜ್, ಶ್ರೀನಾಥ್, ರಮೇಶ್ ಯಾದವ್, ಆಶಾ ಜೈನ್, ಸುಪ್ರಿತ್ ಕಾರ್ಬೈಲ್ ಇತರರಿದ್ದರು. 
ಜಿಲ್ಲೆ

ನಾಯಕತ್ವ ಗುಣ ಬೆಳೆಸಿಕೊಳ್ಳಿ

ಜಿ. ಗಜೇಂದ್ರ

ಮೂಡಿಗೆರೆ: ಜೆಸಿಐ ಪ್ರತಿಯೊಬ್ಬರನ್ನೂ ಸಮಾಜಮುಖಿಯಾಗಿ ಬೆಳೆಸುತ್ತದೆ ಎಂದು ಜೆಸಿಐ ರಾಷ್ಟ್ರೀಯ ನಿರ್ದೇಶಕ ಟಿ.ಎನ್.ದೇವರಾಜ್ ಹೇಳಿದರು.
ಪಟ್ಟಣದ ಜೇಸಿ ಭವನದಲ್ಲಿ ಭಾನುವಾರ ನಡೆದ ಜೆಸಿಐ ಪ್ರೇರಣಾ ಸಪ್ತಾಹ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ಮನುಷ್ಯ ಪ್ರತಿಫಲಾಪೇಕ್ಷೆ ಬಯಸದೆ ಉತ್ತಮ ಕೆಲಸ ಮಾಡಿದರೆ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.
ಉದ್ಯಮಿ ಶ್ರೀನಾಥ್ ಮಾತನಾಡಿ, ಬೆಂಗಳೂರು ಮಹಾನಗರ ಹಿಂದೆ ಗಾರ್ಡನ್ ಸಿಟಿಯಾಗಿತ್ತು. ಈಗ ಗಾರ್ಬೇಜ್ ಸಿಟಿಯಾಗುತ್ತಿದೆ. ಇದಕ್ಕೆ ಮಾನವ ಪ್ರಕೃತಿ ಮೇಲೆ ನಡೆಸುತ್ತಿರುವ ದೌರ್ಜನ್ಯ ಮೂಲ ಕಾರಣ. ಚಿಕ್ಕಮಗಳೂರು ಜಿಲ್ಲೆಯಲ್ಲಿನ ಉತ್ತಮ ಪರಿಸರ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಕೆ.ಕೆ.ಪ್ರದೀಪ್ ಕುನ್ನಳ್ಳಿ ಅವರಿಗೆ ಕಮಲಪತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಸ್ಯನಟ ರಮೇಶ್ ಯಾದವ್, ಜೇಸಿ ವಲಯಾಧ್ಯಕ್ಷೆ ಆಶಾ ಜೈನ್, ಜೇಸಿ ಸಂಸ್ಥೆ ಅಧ್ಯಕ್ಷ ಸುಪ್ರಿತ್ ಕಾರ್ಬೈಲ್, ನಿಕಟಪೂರ್ವಾಧ್ಯಕ್ಷೆ ಸವಿತಾ ರವಿ, ಸಂದೀಪ್ ತ್ರಿಪುರ, ಇಂಪಾ ಸವೀನ್, ದಿವ್ಯಾ ಸುಪ್ರಿತ್, ಕವಿತಾ ಸಂತೋಷ್, ಶ್ರಾವ್ಯಾ ಉದಯ್, ಮಾನ್ವಿಕ್ ಮತ್ತಿತರರಿದ್ದರು.