ಸವಣೂರ: ಜೆಸಿಐ ನಮ್ಮ ಸವಣೂರು ಘಟಕದ ಸಾಮಾಜಿಕ ಕಾರ್ಯಕ್ಕೆ ಜೆಸಿಐ ಭಾರತದ ವಲಯ-24ರ ಪರವಾಗಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ 18ಕ್ಕೂ ಹೆಚ್ಚು ಪ್ರಶಸ್ತಿ, ಬಹುಮಾನ ಲಭಿಸಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ನಗರದ ರುದ್ರಾಂಬಾ ಎಂ.ಪಿ. ಪ್ರಕಾಶ ಪ್ರಥಮ ದರ್ಜೆ ಕಾಲೇಜ್ ಸಭಾಂಗಣದಲ್ಲಿ ಜೆಸಿಐ ಹೂವಿನಹಡಗಲಿ ರಾಯಲ್ ಭಾನುವಾರ ಏರ್ಪಡಿಸಿದ್ದ ಜೆಸಿಐ ಮಧ್ಯವಾರ್ಷಿಕ ವಲಯ ಸಮ್ಮೇಳನ-2025 ಪಾಂಚಜನ್ಯದಲ್ಲಿ ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ನೇತೃತ್ವದಲ್ಲಿ ಪದಾಧಿಕಾರಿಗಳು ಪ್ರಶಸ್ತಿ ಹಾಗೂ ಬಹುಮಾನ ಸ್ವೀಕರಿಸಿದರು.
ರಾಷ್ಟ್ರ ಪ್ರಶಸ್ತಿ: ಜೆಸಿಐ ಭಾರತ ವತಿಯಿಂದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ನಿರ್ವಹಿಸಿರುವ ಕಾರ್ಯಕ್ಷಮತೆಯೊಂದಿಗೆ ಗಣ್ಯ ಅಧ್ಯಕ್ಷೆಯಾಗಿ ತೇಜಸ್ವಿನಿ ಕೊಂಡಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ 2 ರಾಷ್ಟ್ರೀಯ ಪ್ರಶಸ್ತಿಯೊಂದಿಗೆ ಬಹುಮಾನ, ವಿಶೇಷ ರಕ್ತದಾನ ಶಿಬಿರ ಆಯೋಜಿಸಿದ್ದರಿಂದ 2 ರಾಷ್ಟ್ರೀಯ ಅಭಿನಂದನಾ ಪ್ರಮಾಣ ಪತ್ರ ನೀಡಲಾಗಿದೆ. ವಿವಿಧ ವಿಭಾಗಗಳಲ್ಲಿ 18ಕ್ಕೂ ಹೆಚ್ಚು ಪ್ರಶಸ್ತಿಯೊಂದಿಗೆ ಬಹುಮಾನ ಸ್ವೀಕರಿಸಿದರು.
ಜೆಸಿಐ ಭಾರತ ವಲಯ-24ರ ವಲಯಾಧ್ಯಕ್ಷ ಜೆಸಿಐ ಸೆನೆಟರ್ ಗೌರೀಶ ಭಾರ್ಗವ ಕೆ.ವಿ., ವಲಯ ಉಪಾಧ್ಯಕ್ಷ ಜೆಎಫ್ಡಿ ಮಧುಸೂದನ್, ವಲಯ ತರಬೇತಿ ಸಂಯೋಜಕ ವಿದ್ಯಾಧರ ಕುತನಿ, ವಲಯ ತರಬೇತಿ ನಿರ್ದೇಶಕಿ ರಾಜೇಶ್ವರಿ ಹರಿಹರ, ಜೆಸಿಐ ಹೂವಿನಹಡಗಲಿ ರಾಯಲ್ ಅಧ್ಯಕ್ಷ ವಿನಾಯಕ ಕೋಡಿಹಳ್ಳಿ, ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಜಂಬಗಿ, ಪದಾಧಿಕಾರಿಗಳಾದ ಹರೀಶ ಹಿರಳ್ಳಿ, ಪ್ರಕಾಶ ಜಮಾದಾರ, ಡಾ. ಪರಶುರಾಮ ಹೊಳಲ, ಬಾಪುಗೌಡ ಕೊಪ್ಪದ, ಎಸ್.ಬಿ. ಪಾಟೀಲ, ಬಸನಗೌಡ ಪಾಟೀಲ, ಮಧುಕರ ಜಾಲಿಹಾಳ, ಮಲ್ಲಿಕಾರ್ಜುನ ಬಾಣದ, ಶಂಕ್ರಯ್ಯ ಹಿರೇಮಠ, ಜೆಸಿಐ ಲಕ್ಷೆ್ಮೕಶ್ವರ ಪುಲಿಗೇರೆ ಪ್ರಭೆ ಅಧ್ಯಕ್ಷೆ ಲಕ್ಷ್ಮೀ ಹಂಗನಕಟ್ಟಿ ಇತರರು ಇದ್ದರು.