ಜಿಲ್ಲೆ

ಕೃಷ್ಣಾ ಹಾನಗಲ್​ ಪ್ರಶಸ್ತಿಗೆ ಪಂ. ಜಯತೀರ್ಥ ಆಯ್ಕೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ಸಂಗೀತ ವಿದ್ಯಾಲಯ, ಹುಬ್ಬಳ್ಳಿ ಗಂಗೂಬಾಯಿ ಹಾನಗಲ್​ ಸಂಗೀತ ವಿದ್ಯಾಲಯ ಹಾಗೂ ಡಾ. ಅಣ್ಣಾಜಿರಾವ್​ ಶಿರೂರ ಪ್ರತಿಷ್ಠಾನ ನೀಡುವ ಕೃಷ್ಣಾ ಹಾನಗಲ್​ ರಾಷ್ಟ್ರೀಯ ಪ್ರಶಸ್ತಿಗೆ ಗಾಯಕ ಪಂ. ಜಯತೀರ್ಥ ಮೇವುಂಡಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಸಂಗೀತ ವಿದ್ಯಾಲಯ ಕಾರ್ಯದರ್ಶಿ ವಿನಯ ನಾಯಕ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಜಯತೀರ್ಥ ಮೇವುಂಡಿ ಆಯ್ಕೆಯಾಗಿದ್ದು, ಪ್ರಶಸ್ತಿಯು 40 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿದೆ. ಏ. 18ರಂದು ಸಂಜೆ 6.30ಕ್ಕೆ ಸೃಜನಾ ರಂಗ ಮಂದಿರದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಪಂ. ಎಂ. ವೆಂಕಟೇಶಕುಮಾರ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ನಂತರ ಪ್ರಶಸ್ತಿ ಪುರಸ್ಕೃತ ಪಂ. ಜಯತೀರ್ಥ ಮೇವುಂಡಿ ಗಾಯನ ಪ್ರಸ್ತುತಪಡಿಸುವರು. ಅವರಿಗೆ ತಬಲಾದಲ್ಲಿ ಶ್ರೀಧರ ಮಾಂಡ್ರೆ ಹಾಗೂ ಹಾಮೋರ್ನಿಯಂನಲ್ಲಿ ಬಸವರಾಜ ಹಿರೇಮಠ ಸಾಥ್​ ನೀಡಲಿದ್ದಾರೆ ಎಂದರು.

ಡಾ. ಸೌಭಾಗ್ಯ ಕುಲಕರ್ಣಿ, ಇತರರು ಇದ್ದರು.