ಹೊಸನಗರ ಪಿಕಾರ್ಡ್ ಬ್ಯಾಂಕ್‌ನ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ನಿರ್ದೇಶಕರು ಸನ್ಮಾನಿಸಿದರು. ವಾಲೇಮನೆ ನಾಗೇಶ್, ಸತೀಶ್ ಗೌಡ, ದೇವೇಂದ್ರಪ್ಪ, ಈಶ್ವರಪ್ಪ ಗೌಡ, ಹೂವಮ್ಮ, ನರೇಂದ್ರ, ವೇದಾಂತಪ್ಪ ಇತರರಿದ್ದರು.  
ಜಿಲ್ಲೆ

ಜಯರಾಮ್ ಸತತ 8ನೇ ಬಾರಿ ಅಧ್ಯಕ್ಷ

ಹೊಸನಗರ: ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಎಂ.ವಿ.ಜಯರಾಮ್ ಸತತ 8ನೇ ಬಾರಿ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗುರುಮೂರ್ತಿ ಸಹ ಅವಿರೋಧವಾಗಿ ಆಯ್ಕೆಗೊಂಡರು.

ನಿರ್ದೇಶಕರಾದ ವಾಲೇಮನೆ ನಾಗೇಶ್, ಈಶ್ವರಪ್ಪ ಗೌಡ, ಮಳಲಿ ಸತೀಶ ಗೌಡ, ದೇವೇಂದ್ರಪ್ಪ, ಹೂವಮ್ಮ, ಹೇಮಾವತಿ, ಮಹೇಂದ್ರ, ನರೇಂದ್ರ, ವೇದಾಂತಪ್ಪ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಹಳಗುಂದ ಶ್ರೀಪತಿ ಹಾಗೂ ಕೆಸುವಿನಮನೆ ರತ್ನಾಕರ ಉಪಸ್ಥಿತರಿದ್ದರು.