ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪ್ರಮುಖರಾದ ಶಿವು ಲೋಖಂಡೆ, ಜೈರಾಜ ಪಾತ್ರೆ, ಡಾ.ಅಮಿತ ಅಷ್ಟೂರೆ, ಕಿರಣ ಖಂಡ್ರೆ ಇತರರಿದ್ದರು. 
ಜಿಲ್ಲೆ

ಸಮಾನತೆಗಾಗಿ ರಕ್ತ ಹರಿಸಿದ ಶರಣರು

ಭಾಲ್ಕಿ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ಮತ್ತು ಅಂಧಶೃದ್ಧೆ, ಮೂಢನಂಬಿಕೆ ನಿರ್ಮೂಲನೆಗಾಗಿ ರಕ್ತ ಹರಿಸಿದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣವರ ಜಯಂತ್ಯುತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಷಟ್‌ಸ್ಥಲ ಧ್ವಜರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ತೊಲಗಿಸಲು ಬಸವಣ್ಣವರ ನೇತೃತ್ವದಲ್ಲಿ ಕ್ರಾಂತಿ ನಡೆಯಿತು. ಎಷ್ಟೇ ವಿರೋಧ ವ್ಯಕ್ತವಾದರೂ ಕೂಡ ಶರಣರು ತಮ್ಮ ತತ್ವ ಬಿಟ್ಟು ಕೊಡಲಿಲ್ಲ. ಈ ಕಾರಣಕ್ಕಾಗಿಯೇ ಕಲ್ಯಾಣದಲ್ಲಿ ಕ್ರಾಂತಿ ನಡೆದು ಶರಣರು ರಕ್ತದ ಕಣ ಹರಿಸಿದರು. ಹೀಗಾಗಿ ಇಂತಹ ಶರಣರು ನಡೆದಾಡಿದ ಪವಿತ್ರ ಭೂಮಿ ಮತ್ತೊಮ್ಮೆ ಜಗದಗಲ ಬೆಳಗಬೇಕಿದೆ. ಶರಣರ ವಿಚಾರಧಾರೆ ಜನಮಾನಸಕ್ಕೆ ತಲುಪಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಮುಖ್ಯವಾಗಿದೆ ಎಂದು ತಿಳಿಸಿದರು.

ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಾಗರ ಖಂಡ್ರೆ ಧ್ವಜರೋಹಣ ನೆರವೇರಿಸಿದರು. ಪ್ರಮುಖರಾದ ಶಿವು ಲೋಖಂಡೆ, ಚಂದ್ರಕಾಂತ ಪಾಟೀಲ್, ಜೈರಾಜ ಪಾತ್ರೆ, ಕಿರಣ ಖಂಡ್ರೆ, ಜಗದೀಶ ಖಂಡ್ರೆ, ಹಣಮಂತರಾವ ಚವ್ಹಾಣ್, ಓಂಪ್ರಕಾಶ ರೊಟ್ಟೆ, ಡಾ.ಅಮಿತ ಅಷ್ಟೂರೆ, ಅಮರ ಜಲ್ದೆ, ಸುಭಾಷ ಕಾರಾಮುಂಗೆ, ಬಸವರಾಜ ವಂಕೆ, ವಿಜಯಕುಮಾರ ರಾಜಭವನ, ಅನಿಲ ಲೋಖಂಡೆ, ಅಶೋಕ ಬಾವುಗೆ, ಬಸವರಾಜ ಮರೆ, ವಿಶ್ವನಾಥ ಮೋರೆ, ವಿಲಾಸ ಮೋರೆ, ಟಿಂಕು ರಾಜಭವ ಇತರರಿದ್ದರು.