ಕಂದಗಲ್ಲ ಗ್ರಾಪಂ ಕಚೇರಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ, ಮಾಜಿ ಅಧ್ಯಕ್ಷ ಮಹಮ್ಮದಸಾಬ ಭಾವಿಕಟ್ಟಿ, ಮಹಾಂತೇಶ ಕಡಿವಾಲ, ಮುತ್ತಣ ಯರದಾಳ, ಅಮರಪ್ಪ ಹಡಪದ, ಆನಂದಪ್ಪ ಜವಾನರ, ಶಿವಪ್ಪ ಬಜಂತ್ರಿ ಇತರರಿದ್ದರು. 
ಜಿಲ್ಲೆ

ಶರಣರ ಇತಿಹಾಸ ಉಳಿವಿಗೆ ಜಯಂತಿ ಆಚರಣೆ ಅತ್ಯಗತ್ಯ

ಇಳಕಲ್ಲ: ಪ್ರತಿಯೊಬ್ಬ ಶರಣರ ಇತಿಹಾಸ ಉಳಿಯಬೇಕಾದರೆ ಅವರ ಜಯಂತಿ ಆಚರಣೆ ಅವಶ್ಯ ಎಂದು ಗ್ರಾಪಂ ಅಧ್ಯಕ್ಷ ಮಹಮ್ಮದಸಾಬ್ ಭಾವಿಕಟ್ಟಿ ಹೇಳಿದರು.

ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಪ್ಪಣ್ಣ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

ಹಡಪದ ಅಪ್ಪಣ್ಣನವರು ಮಹಾನ್ ಮೇಧಾವಿಗಳು, ಬಸವಣ್ಣನವರ ಸಮಕಾಲಿನವರಾದ ಅಪ್ಪಣ್ಣನವರ ಅಂಕಿತ ಅಂದಿನ ವಚನಗಳಿಗೆ ಅಗತ್ಯವಾಗಿತ್ತು. ಅಂತಹ ಮೇಧಾವಿ ವಚನಕಾರರು ಹಡಪದ ಅಪ್ಪಣ್ಣನವರು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಅಧ್ಯಕ್ಷ ಮಹಾಂತೇಶ್ ಕಡಿವಾಲ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಮುತ್ತಣ್ಣ ಯರದಾಳ್, ಸದಸ್ಯರಾದ ಅಮರಪ್ಪ ಹಡಪದ, ಮುಖಂಡರಾದ ಆನಂದಪ್ಪ ಜವಾನರ, ಶಿವಪ್ಪ ಬಜಂತ್ರಿ, ದೊಡ್ಡಪ್ಪ ಮರಟಗೇರಿ, ಮಲ್ಲಪ್ಪ ಪೋತನಾಳ, ಶಂಕರ ಕಾಳಿಪ್ರಸಾದ, ಗೂಳಪ್ಪ ಪೂಜಾರಿ ಇತರರಿದ್ದರು. ಕರಿಯಪ್ಪ ಸಂಗಟಿ ಸ್ವಾಗತಿಸಿದರು. ಬಸವರಾಜ್ ಬಾರಕೇರ ವಂದಿಸಿದರು. ಶಿವರಾಜ್ ಅಳ್ಳೊಳ್ಳಿ ನಿರೂಪಿಸಿದರು.