ಇತ್ತೀಚೆಗೆ ನಿಧನರಾದ ಜಯಕರ ಸುವರ್ಣ ಅವರಿಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.  
ಜಿಲ್ಲೆ

ಸರಳ ವ್ಯಕ್ತಿತ್ವದ ಜಯಕರ ಸುವರ್ಣ : ಸಭೆಯಲ್ಲಿ ನಾಗರಾಜ ಬಣ್ಣನೆ

ಕುಂದಾಪುರ: ಹಿರಿಯ ಪತ್ರಕರ್ತರಾಗಿ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದ ಜಯಕರ ಸುವರ್ಣ ಸರಳ ವ್ಯಕ್ತಿತ್ವದ ಸಜ್ಜನ ವರದಿಗಾರರಾಗಿದ್ದರು. ಯಾವುದೇ ಹಮ್ಮು ಇಲ್ಲದೆ ಎಲ್ಲರೊಂದಿಗೂ ಬೆರೆತು ಸಾಮಾಜಿಕ ಬದ್ಧತೆ ಹೊಂದಿದ್ದರು ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಹೇಳಿದರು.

ಇತ್ತೀಗೆ ನಿಧನರಾದ ಜಯಕರ ಸುವರ್ಣ ಅವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರರ ಸಂಘದ ವತಿಯಿಂದ ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಪತ್ರಕರ್ತ ಪ್ರಶಾಂತ್ ಪಾದೆ ಮತ್ತು ಸಂತೋಷ್ ಕುಂದೇಶ್ವರ ನುಡಿನಮನ ಸಲ್ಲಿಸಿದರು. ಬಳಿಕ ದಿ.ಜಯಕರ ಸುವರ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮೌನಾಚರಣೆ ನಡೆಸಲಾಯಿತು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.