ಜಿಲ್ಲೆ

ಜಯ-ವಿಜಯ ಕಂಬಳ ಸಮಾಪನ : 24 ಗಂಟೆಯೊಳಗಡೆ ಸಮಾಪ್ತಿ : 163 ಜೊತೆ ಕೋಣಗಳು ಭಾಗಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಪಣಪಿಲ ವತಿಯಿಂದ ನಡೆದ 15ನೇ ವರ್ಷದ ಹೊನಲು ಬೆಳಕಿನ ಜೋಡುಕರೆ ಕಂಬಳ 24 ಗಂಟೆಯೊಳಗಡೆ ಯಶಸ್ವಿಯಾಗಿ ಸಮಾಪ್ತಿಗೊಂಡಿತು.

ಕಂಬಳ ಕೂಟದಲ್ಲಿ 163 ಜೊತೆ ಕೋಣಗಳು ಭಾಗಿಯಾಗಿದ್ದವು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನೆಲ್ಲಿಕಾರು ಪಂಚಾಯಿತಿ ಅಧ್ಯಕ್ಷ ಉದಯ್ ಪೂಜಾರಿ, ವಾಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗಣೇಶ್ ಬಿ.ಅಳಿಯೂರು, ದರೆಗುಡ್ಡೆ ಪಂಚಾಯಿತಿ ಸದಸ್ಯರಾದ ಮುನಿರಾಜ್ ಹೆಗ್ಡೆ, ಕೆ.ಸಂತೋಷ್ ಪೂಜಾರಿ, ದರಗುಡ್ಡೆ ಪಂಚಾಯಿತಿ ಗ್ರಾಮಕರಣಿಕ ಕಿಶೋರ್ ಕುಮಾರ್, ವಿಎಸ್ ಆರೆಂಜರ್ಸ್ ಮಾಲೀಕ ರಮನಾಥ ಸಾಲ್ಯಾನ್, ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಹೆಗ್ಡೆ ನಂದೊಟ್ಟು, ಜಿಲ್ಲಾ ಕಂಬಳ ಸಮಿತಿಯ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ವಿಜಯಕುಮಾರ್ ಕಂಗಿನ ಮನೆ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಸುಭಾಷ್ ಚಂದ್ರ ಚೌಟ, ಸರ್ಕಾರಿ ಪ್ರಾಥಮಿಕ ಶಾಲೆ ಪಣಪಿಲ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಪೂಜಾರಿ, ಶ್ರೀ ಇಟಲ ಗೆಳೆಯರ ಬಳಗ ಅಧ್ಯಕ್ಷ ಸದಾನಂದ ಪೂಜಾರಿ ಉಮಿಲುಕ್ಕು ಉಪಸ್ಥಿತರಿದ್ದರು. ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಅಶ್ವತ್ ಪಣಪಿಲ ಸ್ವಾಗತಿಸಿದರು.