ಶಿಗ್ಗಾಂವಿ: ವಿಭಿನ್ನ ಪರಿಕಲ್ಪನೆಯಿಂದ ಕೂಡಿರುವ ಜಾನಪದ ವಿಶ್ವವಿದ್ಯಾಲಯ ಅಪಾರ ಜ್ಞಾನ ಸಂಪತ್ತನ್ನು ಹೊಂದಿದೆ. ಇಲ್ಲಿನ ಕಲಾ ಪ್ರತಿಭೆಗಳಿಂದ ಹೊರಹೊಮ್ಮವ ಜನಪದ ಗೀತೆಗಳು ಸುಮಧುರವಾದ ರಸದೌತಣ ನೀಡುವಂತಿವೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶೆ ಫೈರೋಜಾ ಉಕ್ಕಲಿ ಹೇಳಿದರು.
ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯ ವೀಕ್ಷಣೆಗೆ ಬುಧವಾರ ಆಗಮಿಸಿದ ಸಂದರ್ಭದಲ್ಲಿ ವಿವಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಲ್ಲಿರುವ ಅಧ್ಯಾಪಕರು ಜಾನಪದದ ಕುರಿತು ಆಳವಾದ ಜ್ಞಾನ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಲಪತಿ ಪ್ರೊ. ಟಿ.ಎಂ. ಭಾಸ್ಕರ, ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ, ಶಹಜಹಾನ್ ಮುದಕವಿ, ಡಾ. ಆನಂದಪ್ಪ ಜೋಗಿ, ಡಾ. ವಿಜಯಲಕ್ಷ್ಮೀ ಗೇಟಿಯವರ, ಗೋವಿಂದಪ್ಪ ತಳವಾರ, ಶರೀಫ್ ಮಾಕಪ್ಪನವರ, ಇತರರು ಉಪಸ್ಥಿತರಿದ್ದರು.