ಶಿಗ್ಗಾಂವಿ: ತಾಲೂಕಿನ ಹುಲಗೂರ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಜಾವೀದ್ಅಹಮ್ಮದ್ ಸವಣೂರ ಹಾಗೂ ಉಪಾಧ್ಯಕ್ಷೆಯಾಗಿ ಸುಮಾ ತವರಿಮಠ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
22 ಸದಸ್ಯ ಬಲ ಹೊಂದಿರುವ ಹುಲಗೂರ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಆಡಳಿತಕ್ಕೆ ಅಧ್ಯಕ್ಷ ಸ್ಥಾನ ‘ಅ’ ವರ್ಗ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜಾವೀದ್ಅಹಮ್ಮದ್ ಸವಣೂರ ಮತ್ತು ಖಾದರಬಾಷಾ ವಾಲೀಕಾರ, ಉಪಾಧ್ಯಕ್ಷ ಸ್ಥಾನಕ್ಕೆ ಸುಮಾ ತವರಿಮಠ ಮತ್ತು ರೇಣುಕಾ ಕೊಡ್ಲಿ ಅವರ ನಡುವೆ ತುರುಸಿನ ರ್ಸ್ಧೆ ಏರ್ಪಟ್ಟಿತ್ತು. ಜಾವೀದ್ ಅಹಮ್ಮದ್ ಸವಣೂರ ಮತ್ತು ಸುಮಾ ತವರಿಮಠ ತಲಾ 13 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಚನ್ನಬಸವೇಶ ಜಿನಗಾ ಘೊಷಣೆ ಮಾಡಿದರು.
ನಂತರ ನಡೆದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಗ್ರಾಪಂ ಸದಸ್ಯರಾದ ಜಯವ್ವ ಸಜ್ಜನರ, ರೇಣುಕಾ ಪಾಟೀಲ, ಫಯಾಜ್ ಅಹಮದ್ ಬಾವಿಕಟ್ಟಿ, ಚಂದ್ರಪ್ಪ ಆಚೆಬಣದ, ರುದ್ರಪ್ಪ ಕೆಳಗಿನಮನಿ, ಭೀಮಪ್ಪ ಬನ್ನೂರು, ಬಸವರಾಜ ನೀರಲಗಿ, ಅನ್ನಪೂರ್ಣಾ ಕರೆಣ್ಣನವರ, ಬಸವಂತಪ್ಪ ಹೈಗರ, ಮಂಜುಳಾ ದೇಸಾಯಿ, ರಹಾನಾಬಾನು ಜೈಕಿನಕಟ್ಟಿ, ಗಿರೀಶ ನಡವಲಕೇರಿ, ಹನೀಪಸಾಬ್ ಬಾವಿಕಟ್ಟಿ, ದೇವಕ್ಕ ಇಳಿಗೇರ, ಅಬ್ದುಲಖಾದರ್ ನೆರ್ತಿ, ಸರೋಜಾ ಗಂಗಣ್ಣನವರ, ರಜೀಯಾಬಾನು ಗದಗ, ಶಂಭುಲಿಂಗಪ್ಪ ದೇಸಾಯಿ, ಪಿಡಿಒ ಬಿ.ಕೆ. ಸಂಶಿ ಹಾಗೂ ಪಂಚಾಯತಿ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.