ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಿಮಿತ್ತ ಇಲ್ಲಿಯ ಜವಳಿಸಾಲನಲ್ಲಿ ಕರಸೇವಕರಿಗೆ ಸನ್ಮಾನ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಸಂಭ್ರಮದಿಂದ ಜರುಗಿತು.
ಸನ್ಮಾನಿತರ ಪರವಾಗಿ ಮಾತನಾಡಿದ ಮಾಜಿ ಶಾಸಕ ಅಶೋಕ ಕಾಟವೆ, ರಾಮ ರಥಯಾತ್ರೆ ಹೋರಾಟ ಹಾಗೂ 1992ರಲ್ಲಿ ಅಯೋಧ್ಯೆಯಲ್ಲಿ ಕರಸೇವೆ ಕೈಗೊಂಡ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪಾಲಿಕೆ ಮಾಜಿ ಸದಸ್ಯ ರಂಗಾ ಬದ್ದಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕರಸೇವಕರಾದ ಗುರುಸಿದ್ಧ ಶೆಲ್ಲಿಕೇರಿ, ರಾಜು ಹೊಸಕೇರಿ, ಗಜಾನನ ಬೇಕರಿ, ಸದಾನಂದ ಮೆಹರವಾಡೆ, ದತ್ತಾ ಮೆಹರವಾಡೆ, ಜೀವನ್ನ ಕಾಮಕರ ಅವರನ್ನು ಸನ್ಮಾನಿಸಲಾಯಿತು.
ಜವಳಿಸಾಲ ಗಣೇಶೋತ್ಸವ ಮಹಾಮಂಡಳ ಅಧ್ಯಕ್ಷ ಶಿವಯೋಗಿ ಹರ್ತಿ ಅಧ್ಯಕ್ಷತೆ ವಹಿಸಿದ್ದರು.
ಪಾಲಿಕೆ ಸದಸ್ಯೆ ಪ್ರೀತಿ ಲದ್ವಾ, ಮಂಜುನಾಥ ಭೂಸನೂರ, ರವಿ ಈಚಗೇರಿ, ಈರಣ್ಣ ಅಂಗಡಿ, ಮಹೇಶ ಮರೆವಾಡ, ವಿನೋದ ಹಾವರಗಿ, ಗುರು ಪವಾರ ಉಪಸ್ಥಿತರಿದ್ದರು.