??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಜಾತ್ರಾ ಮಹೋತ್ಸವ ಸಂಪನ್ನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಸುಮಾರು 20 ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳಿಗೊಂದಿಗೆ ನಡೆದ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು.
ಮಂಗಳವಾರ ಪ್ರಾತಃಕಾಲದಲ್ಲಿ ಶ್ರೀಮಠದಲ್ಲಿ ನಿವಿರ್ಕಲ್ಪ ಸಮಾಧಿಸ್ಥರಾಗಿರುವ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಗೆ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ರಥದ ಕಳಸವನ್ನು ಅವರೋಹಣ ಮಾಡಲಾಯಿತು.
ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ದುಂಡಗಿ ಸೇರಿ ಹುಬ್ಬಳ್ಳಿ&ಧಾರವಾಡ, ಮರೇವಾಡ, ತಿಮ್ಮಾಪುರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹೆಬ್ಬಳ್ಳಿ, ತಲವಾಯಿ, ಹಾರೋಬೆಳವಡಿ, ನಿಗದಿ, ಬೆನಕನಕಟ್ಟಿ, ಉಪ್ಪಿನಬೆಟಗೇರಿ, ಕ್ಯಾರಕೊಪ್ಪ, ಶಿರೂರ, ದಾಸ್ತಿಕೊಪ್ಪ, ಮಂಟೂರ, ಕೊಟಗೊಂಡಹುಣಸಿ, ಬೆಳಗಾವಿ ಜಿಲ್ಲೆಯ ಇನಾಂಹೊಂಗಲ, ಗದಗ ಜಿಲ್ಲೆಯ ಸೂಡಿ ಸೇರಿ ಇತರ ಕಡೆಗಳ ಜನರು ಜಾತ್ರೆಗೆ ಆಗಮಿಸಿ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಯ ದರ್ಶನಾಶೀರ್ವಾದ ಪಡೆದರು.