ಮಡಿಕೇರಿ:
ಕನ್ನಡ ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಈ ಬಾರಿ ಈ ತಿಂಗಳ 17 ರಂದು ಮಧ್ಯಾಹ್ನ 1.44 ಗಂಟೆಗೆ ಸಲ್ಲುವ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಸಂಭವಿಸಲಿದೆ. ಈ ಸಂದರ್ಭದಲ್ಲಿ ಮಾತೆ ಕಾವೇರಿ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುತ್ತಾಳೆ ಎನ್ನವುದು ಆಸ್ತಿಕರ ನಂಬಿಕೆ. ಈ ವರ್ಷ ಹಗಲಿನ ವೇಳೆ ತೀರ್ಥೋದ್ಭವ ಸಂಭವಿಸುವುದರಿAದ ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಮತ್ತು ಶ್ರೀ ಕ್ಷೇತ್ರ ತಲಕಾವೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದಿದ್ದರೆ ಭಕ್ತರು ಅನಾನೂಕೂಲ ಎದುರಿಸುವ ಸಾಧ್ಯತೆ ಇರುತ್ತದೆ.
ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಭಾಗಮಂಡಲ ಮತ್ತು ತಲಕಾವೇರಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಭಕ್ತರ ಸುಗಮ ಸಂಚಾರಕ್ಕೆ ಮೊದಲು ಈ ರಸ್ತೆ ಸರಿಪಡಿಸುವ ಕೆಲಸ ಆಗಬೇಕು ಎನ್ನುವುದು ಭಕ್ತರ ಆಗ್ರಹ. ಮಡಿಕೇರಿಯಿಂದ ಭಾಗಮಂಡಲಕ್ಕೆ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಅದರಲ್ಲೂ ಭಾಗಮಂಡಲ ಮತ್ತು ತಲಕಾವೇರಿ ಮಧ್ಯೆ ಬೆಳಗ್ಗೆ ಒಂದು ಹೊತ್ತು ಹೊರತುಪಡಿಸಿದರೆ ಮತ್ತೆ ಬಸ್ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಸ್ಥಳೀಯರು. ತೀರ್ಥೋದ್ಭವ ಮತ್ತು ಜಾತ್ರೆ ಅವಧಿಯಲ್ಲಿ ಓಡಾಡುವ ಬಸ್‌ಗಳು ಮತ್ತೆ ಸ್ಥಗಿತವಾಗುತ್ತದೆ. ಈ ಬಾರಿ ಹೀಗಾಗಬಾರದು. ನಿರಂತರವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಮಳೆ ಇನ್ನೂ ಕೂಡ ಆಗಾಗ್ಗೆ ಬರುತ್ತಿರುವುದರಿಂದ ಮಳೆ ಬಂದರೆ ಭಕ್ತರು ರಕ್ಷಣೆ ಪಡೆದುಕೊಳ್ಳಲು ವ್ಯವಸ್ಥೆ ಆಗಬೇಕು. ಶುಚಿತ್ವಕ್ಕೆ ಆದ್ಯತೆ ಕೊಡಬೇಕು. ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇರಬೇಕು, ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು, ಪ್ರವಾಸಿಗರಿಗಿಂತ ಭಕ್ತರಿಗೆ ಶ್ರೀ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕು ಎನ್ನುವ ಬೇಡಿಕೆಗಳೂ ಇವೆ. ಈ ಎಲ್ಲಾ ವಿಷಯಗಳ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ಅಭಿಪ್ರಾಯ ಹಂಚಿಕೊAಡಿದ್ದಾರೆ.
ಮಡಿಕೇರಿ

ಶ್ರೀ ಕಾವೇರಿ ತುಲಾ ಸಂಕ್ರಮಣ ಕೊಡಗಿನವರ ಪಾಲಿಗೆ ಪುಣ್ಯ ದಿನ. ಕೊಡಗಿನವರು ಸೇರಿದಂತೆ ಬೇರೆ ಬೇರೆ ರಾಜ್ಯದಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಪ್ರಸ್ತುತ ರಸ್ತೆ ತೀರ ಹದಗೆಟ್ಟಿದ್ದು ತುರ್ತಾಗಿ ದುರಸ್ತಿ ಆಗಬೇಕಿದೆ. ತಲಕಾವೇರಿಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ದಸರಾ ಸ್ಪೆಷಲ್‌ನಂತೆ ತುಲಾ ಸಂಕ್ರಮಣಕ್ಕಾಗಿ ವಿಶೇಷ ಬಸ್‌ಗಳನ್ನು ಬಿಡಬೇಕು.
ವಿಜಯ್, ಗೋಣಿಕೊಪ್ಪಲು ನಿವಾಸಿ
ಶ್ರೀ ಕಾವೇರಿ ತೀರ್ಥೋದ್ಭವ ಸಂದರ್ಭ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಪುಣ್ಯ ಸ್ನಾನವನ್ನು ಮಾಡುವವರಿಗೆ ಸೂಕ್ತವಾದಂಥ ವ್ಯವಸ್ಥೆ ಹಾಗೂ ಪುಣ್ಯ ಸ್ನಾನ ನಂತರ ಬಟ್ಟೆ ಬದಲಿಸಲು ಬೇಕಾದಂಥ ಸೌಲಭ್ಯಗಳನ್ನು ಮಾಡಿ ಕೊಡಬೇಕು. ಇದರೊಂದಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು.
ಬಿ. ಪೂಜಾ, ವಿರಾಜಪೇಟೆ
ಕೊಡಗಿನ ತಲಕಾವೇರಿಯಲ್ಲಿ ಸಂಭವಿಸುವ ಶ್ರೀ ಕಾವೇರಿ ತೀರ್ಥೋದ್ಭವ ಕೊಡಗಿನವರ ಪಾಲಿನ ಮಹತ್ವದ ಧಾರ್ಮಿಕ ಕಾರ್ಯಕ್ರಮವೂ ಆಗಿದೆ. ಅ ನಂತರ ನಡೆಯುವ ಒಂದು ತಿಂಗಳ ಜಾತ್ರೆಗೆ ಹೆಚ್ವಿನ ಜನರು ಬರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಇರಲಿದೆ. ಇದರ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಬೇಕಿದೆ. ಆಗಮಿಸುವ ಭಕ್ತರಿಗೆ ನೆರಳಿನ ವ್ಯವಸ್ಥೆ ಅಲ್ಲಲ್ಲಿ ಕಲ್ಪಿಸಬೇಕು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು.
ಜ್ಯೋತಿ, ಅಂಗನವಾಡಿ ಶಿಕ್ಷಕಿ, ಆಲೂರು ಸಿದ್ದಾಪುರ
ಕೊಡಗಿನ ಜನರ ಆರಾಧ್ಯ ದೈವ ಕುಲದೇವತೆ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವದ ಸಂದರ್ಭ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದು. ನೂಕು-ನುಗ್ಗಲು, ತಳ್ಳಾಟ ಸಂಭವಿಸಿದAತೆ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಮತ್ತು ಭದ್ರತೆ ಕಲ್ಪಿಸಿ ಕೊಡಬೇಕು. ಸೂಕ್ತ ರೀತಿಯಲ್ಲಿ ಸಾರಿಗೆ ವ್ಯವಸ್ಥೆ ಮಾಡಿಕೊಡಬೇಕು.
ಪವನ್ ದೇವಯ್ಯ, ಉದ್ಯಮಿ, ನಂದಿಗುAದ
ತಲಕಾವೇರಿಯಲ್ಲಿ ಶ್ರೀ ಕಾವೇರಿ ತೀರ್ಥೋಧ್ಭವ ಸಂದರ್ಭ ನೂಕು-ನುಗ್ಗಲು ಆಗಬಾರದು. ಮಳೆ ಬೀಳುವ ಸಂಭವವಿದ್ದರೆ ರಕ್ಷಣೆಗೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ತಲಕಾವೇರಿಗೆ ತೆರಳುವ ರಸ್ತೆ ಮಾರ್ಗ ಸರಿಪಡಿಸಬೇಕು. ಅವಶ್ಯಕತೆಗೆ ತಕ್ಕಂತೆ ಸರ್ಕಾರಿ ಬಸ್ ಸೌಲಭ್ಯ ಒದಗಿಸಬೇಕು.
ಹೆಚ್. ಎ. ನಾಗರಾಜು, ಅಧ್ಯಕ್ಷ, ಇಂದಿರಾ ಗಾಂಧಿ ಅಭಿಮಾನಿಗಳ ಸಂಘ, ಸೋಮವಾರಪೇಟೆ
ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವದ ನಂತರ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ತುಲಾ ಸಂಕ್ರಮಣದಿAದ ಕಿರು ಸಂಕ್ರಮಣದವರೆಗೆ ಜಾತ್ರೋತ್ಸವ ನಡೆಯುತ್ತದೆ. ಈ ಸಂದರ್ಭ ಜಿಲ್ಲೆಯ ಹಾಗೂ ಹೊರ ರಾಜ್ಯಗಳಿಂದ ಬಹುತೇಕ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಈ ಆಗಮನ ಭಕ್ತಿ ಪೂರ್ವಕವಾಗಿ ಇರಬೇಕೇ ಹೊರತು ಪ್ರವಾಸಕ್ಕೆ ಅಂಟಿಕೊಳ್ಳಬಾರದು. ದೇವಸ್ಥಾನದ ರೀತಿ ನೀತಿಗಳಿಗೆ ಹೊಂದಿಕೊAಡು ಹೋಗುವಂತೆ ದೇವಾಲಯದ ಆಡಳಿತ ಮಂಡಳಿ ವ್ಯವಸ್ಥೆ ಮಾಡಬೇಕು. ದೇವಾಲಯದಲ್ಲಿ ಪ್ರತಿಯೊಬ್ಬ ಭಕ್ತರಿಗೂ ಸಾವಕಾಶವಾಗಿ ದೇವರ ದರ್ಶನ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಬರುವ ಭಕ್ತಾದಿಗಳು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಗಮನಹರಿಸಬೇಕು ಹಾಗೂ ಕಾವೇರಿ ನದಿ ನೀರನ್ನು ಮಲಿನಗೊಳಿಸದಂತೆ ಜಾಗೃತೆ ವಹಿಸಬೇಕು.
ಪ್ರಶಾಂತ್ ಚೆಟ್ಟಿಮಾಡ, ನಿರ್ದೇಶಕರು, ಕೊಡಗು ಕಾಫಿ ಬೆಳೆಗಾರರ ಸಂಘ, ಹೊದ್ದೂರು
ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಈ ಬಾರಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಮಕರ ಲಗ್ನದಲ್ಲಿ ಸಂಭವಿಸಲಿದ್ದು, ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ. ತೀರ್ಥೋದ್ಭವಕ್ಕೆ ಈ ವರ್ಷ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಹಾಗಾಗಿ ಸೂಕ್ತ ಬಸ್ ವ್ಯವಸ್ಥೆ ಮಾಡಬೇಕಾಗಿದೆ. ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಾತ್ಕಾಲಿಕ ಶೌಚಗೃಹ ವ್ಯವಸ್ಥೆ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕುಡಿಯುವ ನೀರು, ಆಹಾರ ಮತ್ತು ಪ್ರಸಾದ ಮತ್ತಿತರ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ಮೂಕೊಂಡ ವಿಜು ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಮಾಜಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ
ಕಾವೇರಿ ಪವಿತ್ರ ತೀರ್ಥೋದ್ಭವ ನಂತರ ಜಾತ್ರೆ ನಿರಂತರವಾಗಿ ಒಂದು ತಿಂಗಳವರೆಗೆ ನಡೆಯುವ ಕಾರಣ ತೀರ್ಥೋದ್ಭವಕ್ಕೆ ಆಗಮಿಸುವಂಥ ಭಕ್ತರ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡಬೇಕು. ಇದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಭಾಗಮಂಡಲದಿAದ ತಲಕಾವೇರಿಗೆ ಹೆಚ್ಚು ಸಿಗುವಂತಾಗಬೇಕು. ಪ್ರವಾಸಿಗರಾಗಿ ಬರುವವರಿಗಿಂತ ಭಕ್ತಾದಿಗಳಾಗಿ ಬರುವವರಿಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಬೇಕು.
ಟಿ.ಎಸ್. ಅಶ್ವನ್, ಅರಸು ನಗರ, ವಿರಾಜಪೇಟೆ
ನಾಡಿನ ಜೀವನದಿ ತಲಕಾವೇರಿಯ ಪವಿತ್ರ ತೀರ್ಥೋದ್ಭವ ಒಂದು ವಿಶಿ?À್ಟವಾಗಿದ್ದು, ಪವಿತ್ರ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಭಕ್ತಾಧಿಗಳಿಗೆ ಕನಿ?À್ಠ ಮೂಲ ಸೌಲಭ್ಯ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಲಾಗಿದೆ. ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಾತ್ಕಾಲಿಕ ಶೌಚಗೃಹ, ಶುದ್ಧ ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಸೂಚಿಸಲಾಗಿದೆ. ಹಿರಿಯರು, ಮಕ್ಕಳು ಎಲ್ಲರೂ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಆಗಮಿಸಲಿದ್ದಾರೆ. ಕಳೆದ ಬಾರಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಈ ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಬAಧಿಸಿದವರಿಗೆ ನಿರ್ದೇಶನ ನೀಡಲಾಗಿದೆ,
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ