ಚಿಕ್ಕಮಗಳೂರಿನ ತಾಲೂಕು ಕಚೇರಿ ಆವರಣದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥಾಪಕ ಲಾರ್ಡ್ ಬೇಡೆನ್ ಪೋವೆಲ್ ಜನ್ಮದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಜಾಥಾ ನಡೆಸಿದರು. ತಹಸೀಲ್ದಾರ್ ಸುಮಂತ್, ಎ.ಎನ್.ಮಹೇಶ್, ಎಂ.ಎನ್.ಷಡಕ್ಷರಿ, ಮಮತಾ, ಸಂಧ್ಯಾರಾಣಿ ಇತರರಿದ್ದರು. 
ಜಿಲ್ಲೆ

ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳ ಜಾಥಾ

ಎಸ್.ಎನ್.ರವೀಂದ್ರ

ಚಿಕ್ಕಮಗಳೂರು: ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥಾಪಕ ಲಾರ್ಡ್ ಬೇಡೆನ್ ಪೋವೆಲ್ ಜನ್ಮದಿನಾಚರಣೆ ಅಂಗವಾಗಿ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಜಾಥಾಕ್ಕೆ ತಹಸೀಲ್ದಾರ್ ಸುಮಂತ್ ಚಾಲನೆ ನೀಡಿದರು.

ಜಾಥಾ ನಗರದ ಎಂ.ಜಿ.ರಸ್ತೆ ಮೂಲಕ ಜಿಲ್ಲಾ ಆಟದ ಮೈದಾನದವರೆಗೆ ನಡೆಯಿತು. ಬಳಿಕ ಮಕ್ಕಳಿಗೆ ಧ್ವಜ ನಿರ್ಮಾಣ, ಕರವಸ್ತ್ರ ತಯಾರಿಕೆ, ಕಥೆ ಹೇಳುವ ಸ್ಪರ್ಧೆ ಸೇರಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಜಾಥಾದಲ್ಲಿ ಸುಮಾರು 13 ಶಾಲೆಗಳಿಂದ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಕಬ್ಸ್ ಹಾಗೂ ಬುಲ್‌ಬುಲ್‌ನ 430ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಸ್ಥೆ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಆಯುಕ್ತ ಎಂ.ಎನ್.ಷಡಕ್ಷರಿ, ಗೈಡ್ಸ್ ಆಯುಕ್ತೆ ಮಮತಾ, ತರಬೇತಿ ಆಯುಕ್ತೆ ಸಂಧ್ಯಾರಾಣಿ, ಸಂಘಟನಾ ಆಯುಕ್ತ ಕಿರಣ್‌ಕುಮಾರ್, ಸ್ಥಳೀಯ ಸಂಸ್ಥೆ ಅಧ್ಯಕ್ಷ ನಂದಕುಮಾರ್ ಇತರರಿದ್ದರು.