ಜಿಲ್ಲೆ

ಜರಗನಹಳ್ಳಿ ಪ್ರಶಸ್ತಿಗೆ ಸುಶೀಲಾ ಸೋಮಶೇಖರ್ ಆಯ್ಕೆ

ಬೆಂಗಳೂರು: ಕರ್ನಾಟಕ ವಿಕಾಸ ರಂಗ ನೀಡುವ ‘ಜರಗನಹಳ್ಳಿ ಶಿವಶಂಕರ್ ಹನಿಗವನ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ಸುಶೀಲಾ ಸೋಮಶೇಖರ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 5 ಸಾವಿರ ನಗದು ಒಳಗೊಂಡಿದೆ. ಚುಟುಕು ಕವಿ ಜರಗನಹಳ್ಳಿ ಶಿವಶಂಕರ್ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಗೆ ಬಂದಿದ್ದ 2023ನೇ ಸಾಲಿನ ಹನಿಗವನ ಕೃತಿಗಳನ್ನು ಸಾಹಿತಿ ಹಿ.ಚಿ. ಬೋರಲಿಂಗಯ್ಯ ಅವರು ಪರಾಮರ್ಶೆ ಮಾಡಿದ್ದರು. ಅಂತಿಮವಾಗಿ ಸುಶೀಲಾ ಅವರ ‘ಒಳಗೊಂದು ತಣ್ಣನೆಯ ನದಿ ಕೃತಿ’ ಯನ್ನು ಆಯ್ಕೆ ಮಾಡಲಾಗಿದೆ.

ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ತಿಳಿಸಿದ್ದಾರೆ.