ಜಿಲ್ಲೆ

ಜ.18ರಂದು ಕೊಟ್ಟೂರು ತಾಪಂ ಕಚೇರಿ ಆರಂಭ, ಪ್ರಭಾರ ಇಒ ಬಸಣ್ಣ ಮಾಹಿತಿ

Ballari

ಕೊಟ್ಟೂರು: ಪಟ್ಟಣದ ಎಲ್‌ಬಿ ಬಡಾವಣೆಯ ಶಾಲೆಯಲ್ಲಿ ಖಾಲಿ ಇರುವ 8 ಕೊಠಡಿಗಳಲ್ಲಿ ಜ.18 ರಂದು ಕೊಟ್ಟೂರು ನೂತನ ತಾಪಂ ಕಚೇರಿ ಆರಂಭಿಸಲಾಗುವುದು ಎಂದು ಪ್ರಭಾರ ತಾಪಂ ಇಒ ಬಸಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು. ಕೊಟ್ಟೂರು ತಾಲೂಕು ರಚನೆಯಾಗಿ 22 ತಿಂಗಳಾದ ಬಳಿಕ ತಾಪಂ ಕಚೇರಿ ಆರಂಭವಾಗುತ್ತಿದೆ. ಇನ್ನು 21 ಇಲಾಖೆಗಳು ಕಾರ್ಯ ಆರಂಭಿಸಬೇಕಿದೆ. ತಾತ್ಕಾಲಿಕವಾಗಿ ತಲಾ ಒಂದು ಎಫ್‌ಡಿಎ, ಎಸ್‌ಡಿಎ, ಕಂಪ್ಯೂಟರ್ ಆಪರೇಟರ್ ಹುದ್ದೆ ಮಂಜೂರಾಗಿದೆ. ಡಿಡಿ ಕೋಡ್, ಟ್ರೇಜರಿ ಲಾಗಿನ್‌ಗಳನ್ನು ಬದಲಿಸಬೇಕಿದ್ದು, ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಾಗುವುದು. ಏಪ್ರಿಲ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ತಾಪಂ ಕಚೇರಿ ಕಾರ್ಯ ಆರಂಭಿಸಲಿದೆ ಎಂದರು.