ಜಿಲ್ಲೆ

ಜನೌಷಧ ಕೇಂದ್ರಗಳಿಂದ ಬಡವರಿಗೆ ಅನುಕೂಲ

ವಿವೇಕಾನಂದ ದಾಸನಕೊಪ್ಪ

ಲಕ್ಷ್ಮೇಶ್ವರ: ಬಡವರು, ಜನಸಾಮಾನ್ಯರಿಗೆ ಹಾಗೂ ಕಡಿಮೆ ಬೆಲೆಯಲ್ಲಿ ಔಷಧ ಲಭ್ಯವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಜನೌಷಧ ಕೇಂದ್ರಗಳನ್ನು ಪ್ರಾರಂಭಿಸಿದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಜನೌಷಧ ಹಾಗೂ ಇತರ ಔಷಧ ಅಂಗಡಿಗಳಲ್ಲಿ ದೊರೆಯುವ ಔಷಧಗಳು ಒಂದೇ ಆಗಿರುತ್ತವೆ. ಆದರೆ, ಬೇರೆ ಬೇರೆ ಹೆಸರು ಹೊಂದಿರುತ್ತವೆ. ಖಾಸಗಿ ಔಷಧಂಗಡಿಯಲ್ಲಿ ನೂರಾರು ರೂಪಾಯಿ ಕೊಟ್ಟು ಖರೀದಿಸುವ ಔಷಧ ಇಲ್ಲಿ ಕಡಿಮೆ ದರದಲ್ಲಿ ಸಿಗುತ್ತದೆ. ಇದರಿಂದ ಬಡವರು, ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಮುಖ್ಯವಾಗಿ ಮಧುಮೇಹ, ರಕ್ತದೊತ್ತಡ, ಹೃದಯರೋಗ, ಜ್ವರ, ನೆಗಡಿ, ಕೆಮ್ಮಿನ ಹಾಗೂ ಗರ್ಭಿಣಿಯರು ಸೇರಿ ಚಿಕ್ಕಮಕ್ಕಳಿಗೆ ಬೇಕಾದ ಔಷಧಗಳು ಜನೌಷಧ ಕೇಂದ್ರದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತವೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ, ಗಿರೀಶ ಅಗಡಿ, ವಿಜಯ ಮೆಕ್ಕಿ, ಸಿದ್ದು ಸವಣೂರ, ನವೀನ ಬೆಳ್ಳಟ್ಟಿ, ದುಂಡೇಶ ಕೊಟಗಿ, ಗಿರೀಶ ಚೌರಡ್ಡಿ, ರಂಗಣ್ಣ ಬದಿ, ಅಶೋಕ ಶಿರಹಟ್ಟಿ, ಅನೀಲ ಮುಳಗುಂದ, ವಿಜಯ ಬೂದಿಹಾಳ, ಐ.ಕೆ. ಹೊನ್ನಪ್ಪನವರ, ದೇವಪ್ಪ ನಂದೆಣ್ಣವರ, ವಿಶಾಲ ಬಟಗುರ್ಕಿ ಸೇರಿ ಹಲವರಿದ್ದರು.