ಗುರುಪುರ: ಗಂಜಿಮಠದ ಶ್ರೀ ಗಣೇಶ್ ಆಟೋ ಪಾರ್ಕ್ ವಾರ್ಷಿಕ ಮಹಾಸಭೆಯಲ್ಲಿ ರಚಿಸಲಾದ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಜನಾರ್ದನ ಪೂಜಾರಿ ಒಡ್ಡೂರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹೊನ್ನಯ್ಯ ಗಣೇಶನಗರ, ಕಾರ್ಯದರ್ಶಿಯಾಗಿ ಮೊಹಮ್ಮದ್ ಮುಸ್ತಫ ಕುಕ್ಕಟ್ಟೆ, ಕೋಶಾಧಿಕಾರಿಯಾಗಿ ಜನಾರ್ದನ ಆಚಾರಿ ಮುಳಲಿ, ಗೌರವಾಧ್ಯಕ್ಷರಾಗಿ ರಮಾನಾಥ ರೈ ಅಳಿಕೆ, ಕ್ರೀಡಾ ಕಾರ್ಯದರ್ಶಿ ಸಂತೋಷ್ ಲೆಶ್ಲೆ, ಸಾಂಸ್ಕೃತಿಕ ಕಾರ್ಯದರ್ಶಿ ನಾಗೇಶ್ ಮುರ ಹಾಗೂ ದಾಖಲೆ ಪರಿಶೀಲಕರಾಗಿ ಅಶೋಕ್ ಪ್ರಭು ಅವರನ್ನು ಆಯ್ಕೆ ಮಾಡಲಾಯಿತು.