ಜಿಲ್ಲೆ

ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಸ್ವಚ್ಛತಾ ಅಭಿಯಾನ

Mangaluru - Hariprasad Rai

ಮಂಗಳೂರು : ಪಡೀಲ್ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ನಮ್ಮ ನಗರ ಸ್ವಚ್ಚ ನಗರ ಅಭಿಯಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಜನಪ್ರಿಯ ಆಸ್ಪತ್ರೆಯಲ್ಲಿ ನಡೆಯಿತು.
ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ. ಮಾತನಾಡಿ ಕನ್ನಡ ನಾಡಿನಲ್ಲಿ ನಮಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಹಾಸನದಲ್ಲಿ ಹಲವು ವರ್ಷಗಳಿಂದ ಕನ್ನಡ ಉಳಿಸಲು ಬೆಳೆಸಲು ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗ ಮಂಗಳೂರಿನಲ್ಲಿ ಮೊದಲ ಬಾರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಪೋಟರ್ ಚಂದ್ರಾವತಿ ಮಾತನಾಡಿ ಆರೋಗ್ಯ ಸ್ಚಚ್ಛವಾಗಬೇಕಾದರೆ ಪರಿಸರ ಸ್ವಚ್ಚವಾಗಿಡಬೇಕು ಎಂದು
ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ ಹಾಸನದಲ್ಲಿ ಜನರ ಜನಮನ ಗೆದ್ದ ಬಶೀರ್ ಅವರು ನಮ್ಮ ಜಿಲ್ಲೆಯ ಜನಮನ ಗೆದ್ದಿದ್ದಾರೆ. ಸ್ವಚ್ಚತೆ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು. ಸಾಧಕರಾದ ನಜೀರ್ ಬೆಂಗ್ರೆ ಮತ್ತು ಜಾರ್ಜ್ ಪಿ.ವಿ.ಅವರನ್ನು ಸನ್ಮಾನಿಸಲಾಯಿತು.
ಎಂ ಫ್ರೆಂಡ್ಸ್‌ನ ಸುಜಾ ಮಹಮ್ಮದ್, ಸಂತೋಷ್ ಶೆಟ್ಟಿ, ಸುರೇಶ್ ಆಚಾರ್, ದೇವಿಪ್ರಸಾದ್, ಶಾಕೀರ್ ಅಳಕೆಮಜಲು, ಅಬ್ದುಲ್ ಜಬ್ಬಾರ್ ಮಾರಿಪಳ್ಳ, ಮಹಮ್ಮದ್ ಶಾಕೀರ್, ಆರೀಫ್ ಪಡುಬಿದ್ರೆ, ಉಮ್ಮರ್ ಫಾರೂಕ್, ನಾಸೀರ್ ಕಂಬಳಬೆಟ್ಟು, ಶಾಕೀರ್ ಅಳಕೆಮಜಲು, ಮಹಮ್ಮದ್ ಕಂಬಳಬೆಟ್ಟು, ಗಫೂರ್ ಕಂಬಳಬೆಟ್ಟು ಡಾ. ನೂಮನ್, ನೌಸಿನ್ ಬದ್ರಿಯಾ ಉಪಸ್ಥಿತರಿದ್ದರು.
ಜನಪ್ರಿಯ ಆಸ್ಪತ್ರೆಯ ಸಿಇಓ ಡಾ. ಕಿರಾಸ್ ಪರ್ತಿಪ್ಪಾಡಿ ನಿರೂಪಿಸಿದರು.