ಜಿಲ್ಲೆ

ಮಡಿಕೇರಿಯಲ್ಲಿ 'ಕೊಡಗು ಜಾನಪದ ಬೆಡಗು'

ಸುನಿಲ್ ಪೊನ್ನೇಟಿ

ಮಡಿಕೇರಿ:

ಅಭಿವೃದ್ಧಿಯ ಅನಿವಾರ್ಯತೆ ಇದೆ. ಆದರೆ ಇದೇ ಅಭಿವೃದ್ಧಿ ಅವಸಾನಕ್ಕೆ ಕಾರಣ ಆಗಬಾರದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು. ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಆಶ್ರಯದಲ್ಲಿ ಸೋಮವಾರ ಇಲ್ಲಿ ನಡೆದ 'ಕೊಡಗು ಜಾನಪದ ಬೆಡಗು' ಜಾನಪದ ನಡೆ ವಿದ್ಯಾರ್ಥಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆತಂಕ, ಅನುಮಾನದ ಈ ದಿನಗಳಲ್ಲಿ ಒಳಗಿನ ಸತ್ಯಗಳನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ವಿದ್ಯಾರ್ಥಿಗಳಲ್ಲಿ ಇದೆ. ವಿದ್ಯಾರ್ಥಿಗಳದ್ದು ಯಾವಾಗಲೂ ಕಟ್ಟುವ ಕೈ ಆಗಬೇಕೇ ಹೊರತೂ ಕೆಡಹುವ ಕೈ ಆಗಬಾರದು ಆಗ ಮಾತ್ರ ಭವಿಷ್ಯ ಉತ್ತಮವಾಗುತ್ತದೆ.

ವಾಸ್ತವಗಳನ್ನು ಬಿಟ್ಟು ಬದುಕುವುದು ಕಷ್ಟ ಹಾಗಾಗಿ ಆಗಾಗ್ಗೆ ನಮ್ಮೊಳಗೆ ನಾವೇ ಮಾತಾಡಿಕೊಳ್ಳಬೇಕಾಗುತ್ತದೆ. ಎಡವುವ ದಾರಿ ಪಕ್ಕಕ್ಕೆ ಇಟ್ಟು ಸುಲಲಿತವಾಗಿ ನಡೆಯುವ ರಹದಾರಿ ಹುಡುಕಿಕೊಳ್ಳಬೇಕು. ಸಾಧಕರ ಪಟ್ಟಿಯಲ್ಲಿ ಬಂದು ನಮಗಾಗಿ ಮಹತ್ವದ್ದು ಬಿಟ್ಟು ಹೋದವರನ್ನು ಸಮಾಜ ಎಲ್ಲಾ ಕಾಲಕ್ಕೂ ನೆನನಪಿನಲ್ಲಿ ಇಟ್ಟುಕೊಳ್ಳುತ್ತದೆ ಎಂದರು.

ಜಾನಪದ ಅಕಾಡೆಮಿ ಸದಸ್ಯ ಸಂಚಾಲಕ ಡಾ. ಮೈಸೂರು ಉಮೇಶ್ ಮಾತನಾಡಿ ಅಕಾಡೆಮಿಯ ಈ ಮಾದರಿಯ ಮೊದಲ ಕಾರ್ಯಕ್ರಮ ಕೊಡಗಿನಲ್ಲಿ ನಡೆಯುತ್ತಿದೆ. ಜಗತ್ತಿನ ಈಗಿನ ಬದಲಾವಣೆ ಗಮನಿಸಿದರೆ ಎಲ್ಲರೂ ಏಕ ಸಂಸ್ಕೃತಿ ಕಡೆಗೆ ಹೋಗುತ್ತಿರುವುದರ ಅನುಭವ ಆಗುತ್ತಿದೆ. ಭಾರತ ಬಹುತ್ವದ ಸಂಸ್ಕೃತಿ ಯ ದೇಶ. ಹಾಗಾಗಿ ಬಹುತ್ವದ ಕಡೆಗೆ ಆಲೋಚನೆ ಮಾಡಬೇಕು. ಜಾನಪದ ಬಹುತ್ವದ ಸಂಕೇತ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟಾçರ್ ಎನ್. ನಮ್ರತಾ ಮಾತನಾಡಿ 1987ರಲ್ಲಿ ಆರಂಭವಾದ ಅಕಾಡೆಮಿ ವತಿಯಿಂದ ಜಾನಪದದ ಉಳಿವಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ಕಾಲೇಜು ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ. ಕೆ.ವಿ. ನಿರ್ಮಲಾ ಮಾತನಾಡಿ ಅತ್ಯಂತ ಸರಳವಾಗಿ ಇರುವ, ಸುಲಭವಾಗಿ ಅರ್ಥವಾಗುವ ಪದಗಳಿಂದ ಕೂಡಿಸ ಹಾಡುಗಳೇ ಜನಪದ ಹಾಡುಗಳು ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲೆ ವಸಂತಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಅಂಬೇಕಲ್ ನವೀನ್ ಮಾತನಾಡಿದರು. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ತುಳಸಿ ಮೋಹನ್, ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಉಪನ್ಯಾಸಕಿ ಡಾ. ಎಸ್.ಜಿ. ಚೈತ್ರಾ, ಡಾ.ಮೋಹನ್ ಕುಮಾರ್ ಮತ್ತಿತರರು ಇದ್ದರು.

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ. ಕಾವೇರಿ ಪ್ರಕಾಶ್ ಕೊಡಗಿನ ಸಾಂಪ್ರದಾಯಿಕ ಊಟೋಪಚಾರಗಳು ಎನ್ನುವ ವಿಷಯದಲ್ಲಿ ವಿಷಯ ಮಂಡಿಸಿದರು. ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಬುಡಕಟ್ಟು ಸಂಸ್ಕೃತಿಯಲ್ಲಿ ಕುಡಿಯರು ಎನ್ನುವ ವಿಷಯದ ಬಗ್ಗೆ ವಿಷಯ ಮಂಡಿಸಿ